Asianet Suvarna News Asianet Suvarna News

ತಲ್ವಾರ್ ವಾರ್; ಸಿಬಿಐ ಜಡ್ಜ್'ರನ್ನು ಫಿಲಂ ಆ್ಯಕ್ಟರ್, ಮ್ಯಾಥ್ಸ್ ಟೀಚರ್'ಗೆ ಹೋಲಿಕೆ ಮಾಡಿದ ಹೈಕೋರ್ಟ್

ಟ್ರಯಲ್ ಜಡ್ಜ್ ಪೂರ್ವಗ್ರಹಕ್ಕೊಳಗಾಗಿ ತಮ್ಮದೇ ರೀತಿಯಲ್ಲಿ ವಿಷಯ ಅರಿತರು. ಭಾವಾವೇಶಕ್ಕೆ ತುತ್ತಾಗಿ ಆಕ್ರೋಶಭರಿತರಾಗಿ ಯೋಚಿಸಿದರು. ಪ್ರಕರಣದಲ್ಲಿದ್ದ ಸಾಕ್ಷ್ಯ ಮತ್ತು ಸಂದರ್ಭಗಳನ್ನೇ ಅಂತಿಮವಾಗಿಟ್ಟುಕೊಂಡು ಗಣಿತದ ಸಮಸ್ಯೆ ಬಗೆಹರಿಸಲು ಯತ್ನಿಸಿದರು. ಆದರೆ, ಟ್ರಯಲ್ ಜಡ್ಜ್ ಆದವರು ಗಣಿತದ ಪ್ರಶ್ನೆ ಸಾಲ್ವ್ ಮಾಡುವ ಮ್ಯಾಥ್ಸ್ ಟೀಚರ್'ನಂತೆ ಆಗಬಾರದು," ಎಂದು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳು ಟೀಕಿಸಿದ್ದಾರೆ.

trial judge acted like film director and maths teacher says allahabad high court

ನವದೆಹಲಿ(ಅ. 13): ಆರುಷಿ ಕೊಲೆ ಪ್ರಕರಣದಲ್ಲಿ ಬಂಧನದಲ್ಲಿದ್ದ ನೂಪುರ್ ಮತ್ತು ರಾಜೇಶ್ ತಲ್ವಾರ್ ಅವರನ್ನು ಆರೋಪ ಮುಕ್ತಗೊಳಿಸಿ ಜೈಲಿನಿಂದ ಬಿಡುಗಡೆ ಮಾಡಿಸಿ ಅಲಹಾಬಾದ್ ಹೈಕೋರ್ಟ್ ನಿನ್ನೆ ಅಚ್ಚರಿಯ ತೀರ್ಪು ನೀಡಿತು. ಆರುಷಿ ಪೋಷಕರನ್ನು ದೋಷಿಗಳನ್ನಾಗಿ ಮಾಡಿ ಜೀವಾವಧಿ ಶಿಕ್ಷೆ ವಿಧಿಸಿದ್ದ ಸಿಬಿಐ ಕೋರ್ಟ್'ನ ತೀರ್ಪನ್ನು ಹೈಕೋರ್ಟ್ ತಲೆಕೆಳಗು ಮಾಡಿತು. ಕೇವಲ ಶಂಕೆಯ ಆಧಾರದ ಮೇಲೆ ಅಪರಾಧಿಗಳೆಂದು ತೀರ್ಮಾನಿಸುವುದು ಸರಿಯಲ್ಲ ಎಂದು ಹೇಳಿದ ಹೈಕೋರ್ಟ್, ತಲ್ವಾರ್ ದಂಪತಿಯನ್ನು ಖುಲಾಸೆಗೊಳಿಸಿತು.

ನ್ಯಾ| ಬಾಲಕೃಷ್ಣ ನಾರಾಯಣ ಮತ್ತು ನ್ಯಾ| ಎ.ಕೆ.ಮಿಶ್ರಾ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠವು ತನ್ನ ತೀರ್ಪಿನಲ್ಲಿ ಕೆಳನ್ಯಾಯಾಲಯದ ನ್ಯಾಯಮೂರ್ತಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಟ್ರಯಲ್ ಜಡ್ಜ್ ಆದವರು ತನ್ನದೇ ಕಲ್ಪನೆಗಳಲ್ಲಿ ತೊಡಗದೆ ಬಹಳ ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ತೀರ್ಪು ನೀಡಬೇಕಿತ್ತು. ಆದರೆ, ಆ ನ್ಯಾಯಮೂರ್ತಿಗಳು ಕಾನೂನನ್ನೇ ತಲೆಕೆಳಗು ಮಾಡಿದ್ದರು ಎಂದು ಹೈಕೋರ್ಟ್ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಗಣಿತದ ಟೀಚರ್'ಗೆ ಹೋಲಿಕೆ:
ಟ್ರಯಲ್ ಜಡ್ಜ್ ಪೂರ್ವಗ್ರಹಕ್ಕೊಳಗಾಗಿ ತಮ್ಮದೇ ರೀತಿಯಲ್ಲಿ ವಿಷಯ ಅರಿತರು. ಭಾವಾವೇಶಕ್ಕೆ ತುತ್ತಾಗಿ ಆಕ್ರೋಶಭರಿತರಾಗಿ ಯೋಚಿಸಿದರು. ಪ್ರಕರಣದಲ್ಲಿದ್ದ ಸಾಕ್ಷ್ಯ ಮತ್ತು ಸಂದರ್ಭಗಳನ್ನೇ ಅಂತಿಮವಾಗಿಟ್ಟುಕೊಂಡು ಗಣಿತದ ಸಮಸ್ಯೆ ಬಗೆಹರಿಸಲು ಯತ್ನಿಸಿದರು. ಆದರೆ, ಟ್ರಯಲ್ ಜಡ್ಜ್ ಆದವರು ಗಣಿತದ ಪ್ರಶ್ನೆ ಸಾಲ್ವ್ ಮಾಡುವ ಮ್ಯಾಥ್ಸ್ ಟೀಚರ್'ನಂತೆ ಆಗಬಾರದು," ಎಂದು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳು ಟೀಕಿಸಿದ್ದಾರೆ.

ಫಿಲಂ ಡೈರೆಕ್ಟರ್'ಗೆ ಹೋಲಿಕೆ:
ಪ್ರಕರಣದಲ್ಲಿ ಏನು ಘಟಿಸಿತು ಎಂಬ ಬಗ್ಗೆ ಟ್ರಯಲ್ ಜಡ್ಜ್ ತಮ್ಮದೇ ಕಲ್ಪನೆಯಲ್ಲಿ ತೇಲಿರುವುದು ಕಂಡುಬಂದಿದೆ. ಜಲವಿಹಾರ್'ನ ಫ್ಲ್ಯಾಟ್'ನ ಒಳಗೆ ಮತ್ತು ಹೊರಗೆ ಏನೇನು ನಡೆಯಿತು ಎಂಬುದನ್ನು ಸಿನಿಮಾ ನಿರ್ದೇಶಕನ ರೀತಿಯಲ್ಲಿ ನ್ಯಾಯಮೂರ್ತಿಗಳು ಕಾಲ್ಪನಿಕ ದೃಶ್ಯಗಳನ್ನ ಹೆಣೆದಿದ್ದರೆಂದು ಹೈಕೋರ್ಟ್ ಜಡ್ಜ್'ಗಳು ತಮ್ಮ ತೀರ್ಪಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಾಸ್ತವವಾಗಿ ಆರುಷಿ ತಲ್ವಾರ್ ಮತ್ತು ಹೇಮರಾಜ್ ಕೊಲೆಯಾದಾಗ ಆ ಮನೆಯಲ್ಲಿದ್ದದ್ದು ಆ ಹುಡುಗಿಯ ತಂದೆ-ತಾಯಿ ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ಮಾತ್ರವೇ. ಸಿಬಿಐ ನ್ಯಾಯಾಲಯವು ಇದನ್ನೇ ಪ್ರಮುಖವಾಗಿ ಆಧಾರವಾಗಿಟ್ಟುಕೊಂಡು ಅವರಿಬ್ಬರನ್ನು ದೋಷಿಯನ್ನಾಗಿ ತೀರ್ಮಾನಿಸಿರುವುದು ಕಂಡುಬಂದಿದೆ. ಪ್ರಕರಣದಲ್ಲಿ ಸಿಬಿಐ ಕೋರ್ಟ್ ತೋರಿದ ಈ ಧೋರಣೆಯನ್ನೇ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು.

Follow Us:
Download App:
  • android
  • ios