ಕಿಸಾನ್ ವಿಕಾಸ ಯಾತ್ರೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ 39 ಲಕ್ಷ ರು.ಗೆ ವಿಶೇಷ ರೈಲನ್ನು ಬುಕ್ ಮಾಡಿ ಕೊಲ್ಹಾಪುರದಿಂದ ದಿಲ್ಲಿಗೆ ಕರೆದೊಯ್ಯಲಾಗಿತ್ತು.

ಗ್ವಾಲಿಯರ್(ನ.23): ಸೋಮವಾರ ದಿಲ್ಲಿಯಲ್ಲಿ ರೈತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಾರಾಷ್ಟ್ರದ ಕೊಲ್ಹಾಪುರದ 1494 ರೈತರನ್ನು ಕರೆತರುತ್ತಿದ್ದ ವಿಶೇಷ ರೈಲೊಂದು ತಪ್ಪು ಮಾರ್ಗದಲ್ಲಿ 160 ಕಿ.ಮೀ. ಚಲಿಸಿದ ಪ್ರಸಂಗ ನಡೆದಿದೆ.

ದಿಲ್ಲಿಯಿಂದ ಮಂಗಳವಾರ ರಾತ್ರಿ 10 ಗಂಟೆಗೆ ಹೊರಟ ಈ ವಿಶೇಷ ರೈಲು ರಾಜಸ್ಥಾನದ ಕೋಟಾ ಮಾರ್ಗವಾಗಿ ಕೊಲ್ಹಾಪುರದತ್ತ ತೆರಳಬೇಕಿತ್ತು. ಆದರೆ ಮಥುರಾ ರೈಲು ನಿಲ್ದಾಣದಲ್ಲಿ ರೈಲ್ವೆ ಸಿಬ್ಬಂದಿಯ ಅಚಾತುರ್ಯದ ಕಾರಣ ಬೇರೆ ಮಾರ್ಗಕ್ಕೆ ರೈಲಿಗೆ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಇದನ್ನು ಅರಿಯದ ರೈಲು ಚಾಲಕ ಹಾಗೆಯೇ ರೈಲು ಚಲಾಯಿಸಿದ್ದಾನೆ. ರೈಲು 160 ಕಿ.ಮೀ. ತಪ್ಪು ಮಾರ್ಗದಲ್ಲಿ ಚಲಿಸಿ ಬೆಳಗ್ಗೆ ಮಧ್ಯಪ್ರದೇಶದ ಬನ್ಮೋರ್ ರೈಲು ನಿಲ್ದಾಣಕ್ಕೆ ಬಂದಾಗಲೇ ತಾವು ಬೇರೆ ಮಾರ್ಗದಲ್ಲಿ ಚಲಿಸುತ್ತಿರುವುದು ಚಾಲಕರ ಅರಿವಿಗೆ ಬಂದಿದೆ.

ಕಿಸಾನ್ ವಿಕಾಸ ಯಾತ್ರೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ 39 ಲಕ್ಷ ರು.ಗೆ ವಿಶೇಷ ರೈಲನ್ನು ಬುಕ್ ಮಾಡಿ ಕೊಲ್ಹಾಪುರದಿಂದ ದಿಲ್ಲಿಗೆ ಕರೆದೊಯ್ಯಲಾಗಿತ್ತು.