ಸಂಚಾರಿ ಪೊಲೀಸರ ಪ್ರಾಮಾಣಿಕತೆ ಭಲೇ ಭಲೇ!

First Published 13, Jul 2018, 7:50 PM IST
Traffic Police in returned the mobile to it's real owner
Highlights

ರಸ್ತೆಯಲ್ಲಿ ಸಿಕ್ಕ ಮೊಬೈಲ್ ಹಿಂದಿರುಗಿಸಿದ ಟ್ರಾಫಿಕ್ ಪೊಲೀಸ್

ಚಾಮರಾಜಪೇಟೆ ಬಳಿಯ ಮಕ್ಕಳ ಕೂಟದ ಬಳಿ ಘಟನೆ

ಮಾಲೀಕನಿಗೆ ಕರೆ ಮಾಡಿ ಮೊಬೈಲ್ ಹಿಂದಿರುಗಿಸಿದ ಪೊಲೀಸರು

ಪೊಲೀಸರ ಪ್ರಾಮಾಣಿಕತೆಗೆ ಹಿರಿಯ ಅಧಿಕಾರಿಗಳ ಶ್ಲಾಘನೆ 
 

ಬೆಂಗಳೂರು(ಜು.13): ರಸ್ತೆಯಲ್ಲಿ ಬಿದ್ದಿದ್ದ ಮೊಬೈಲ್ ಫೋನ್ ನ್ನು ವಾರಸುದಾರರಿಗೆ ಹಿಂತಿರುಗಿಸಿದ ಸಂಚಾರಿ ಪೊಲೀಸರ ಪ್ರಾಮಾಣಿಕತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 

ನಗರದ ಚಾಮರಾಜಪೇಟೆ ಸಮೀಪದ ಮಕ್ಕಳ ಕೂಟದ ಬಳಿ, ವಿವಿ ಪುರಂ ಸಂಚಾರಿ ಪೊಲೀಸರಾದ ಎಎಸ್ ಐ ಗೋಪಾಲಯ್ಯ ಮತ್ತು ಪೇದೆ ನಾಗರಾಜ್ ಕರ್ತವ್ಯದಲ್ಲಿದ್ದರು. ಈ ವೇಳೆ ರಸ್ತೆಯಲ್ಲಿ ಮೊಬೈಲ್ ವೊಂದು ಬಿದ್ದಿದ್ದು ಅವರಿಗೆ ಕಾಣಿಸಿದೆ.

ಕೂಡಲೇ ಮೊಬೈಲ್ ವಶಕ್ಕೆ ಪಡೆದು ಮಾಲೀಕನನ್ನು ಸಂಪರ್ಕಿಸಿ ಮೊಬೈಲ್ ನ್ನು ಹಿಂದಿರುಗಿಸಿದ್ದಾರೆ. ವಿವಿ ಪುರಂ ಪೊಲೀಸರ ಕರ್ತವ್ಯ ನಿಷ್ಠೆಗೆ ಹಿರಿಯ ಅಧಿಕಾರಿಗಳಿಂದ ಶ್ಲಾಘನೆ ವ್ಯಕ್ತವಾಗಿದೆ.
 

loader