Asianet Suvarna News Asianet Suvarna News

ಬೈಕ್ ಸವಾರನ ಮೇಲೆ ಖಾಕಿ ದರ್ಪ: ವಿಡಿಯೋ..!

ಪೊಲೀಸರೆಂದರೆ ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವವರು ಎಂಬ ಭಾವನೆ ಜನಸಾಮಾನ್ಯರಲ್ಲಿ ಇದೆ. ಆದರೆ ಇಂದಿನ ದಿನಗಳಲ್ಲಿ ಖಾಕಿ ವರ್ತನೆ ಇದಕ್ಕೆ ತದ್ವಿರುದ್ದವಾಗಿದೆಯಾ ಎಂಬ ಅನುಮಾನ ಕಾಡುತ್ತಿದೆ.

ಬೆಂಗಳೂರು(ಜೂ.3): ಪೊಲೀಸರೆಂದರೆ ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವವರು ಎಂಬ ಭಾವನೆ ಜನಸಾಮಾನ್ಯರಲ್ಲಿ ಇದೆ. ಆದರೆ ಇಂದಿನ ದಿನಗಳಲ್ಲಿ ಖಾಕಿ ವರ್ತನೆ ಇದಕ್ಕೆ ತದ್ವಿರುದ್ದವಾಗಿದೆಯಾ ಎಂಬ ಅನುಮಾನ ಕಾಡುತ್ತಿದೆ. 

ಬೈಕ್ ಯೂಟರ್ನ್ ಮಾಡಿದ ಎಂಬ ಕಾರಣಕ್ಕೆ  ಟ್ರಾಫಿಕ್ ಪೊಲೀಸರು ರಮೇಶ್ ಎಂಬುವವರ ಮೇಲೆ ಹಲ್ಲೆ ಮಾಡಿರುವ ಬೆಂಗಳೂರಿನಲ್ಲಿ ನಡೆದಿದೆ. ನಗರದ ಶಿವಾನಂದ ಸರ್ಕಲ್ ಬಳಿ  ರಮೇಶ್ ಎಂಬುವವರು ಬೈಕ್ ಯೂಟರ್ನ್ ಮಾಡಿದ್ದರು. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು ರಮೇಶ್ ಅವರ ಮೊಬೈಲ್ ಕಸಿದುಕೊಂಡಿದ್ದಲ್ಲದೇ ಅವರ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ.

ಏಕಾಏಕಿ ರಮೇಶ್ ಅವರನ್ನು ತಡೆದ ಪೊಲೀಸರು, ಅವಾಚ್ಯ ಶಬ್ದಗಳಿಂದ ನಿಂದಿಸಿ ದರ್ವರ್ತನೆ ತೋರಿದ್ದಾರೆ. ಕೂಡಲೇ ತಮ್ಮ ಮೊಬೈಲ್ ಹೊರತೆಗೆದು ವಿಡಿಯೋ ಮಾಡಲೆತ್ನಿಸಿದ ರಮೇಶ್ ಮೇಲೆ ಹಲ್ಲೆ ಮಾಡಿದ ಪೊಲೀಸರು, ಅವರ ಮೊಬೈಲ್ ಕಸಿದುಕೊಂಡು ದರ್ಪ ಮೆರೆದಿದ್ದಾರೆ. ಪೊಲೀಸರು ತಮ್ಮ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋವನ್ನು ಖುದ್ದು ರಮೇಶ್ ತಮ್ಮ ಫೇಸ್‌ಬುಕ್ ನಲ್ಲಿ ಶೇರ್ ಮಾಡಿದ್ದಾರೆ. 

Video Top Stories