ಮುದೋಳ ತಾಲೂಕಿನ ಲೋಕಾಪುರದ ಆದರ್ಶ ಆಂಗ್ಲ ಮಾಧ್ಯಮದ ಶಾಲಾ ಮಕ್ಕಳನ್ನು ಮೂರು ದಿನದ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದರಿಂದ ಊಟ ಉಪಹಾರ ತಯಾರಿಸಿಕೊಳ್ಳಲು ಎರಡು ಸಿಲಿಂಡರಗಳು ಸೇರಿದಂತೆ ಇತರೆ ಎಲ್ಲ ವಸ್ತುಗಳನ್ನು ಹಿಂದಿನ ಕ್ಯಾರಿಯರ್ ನಲ್ಲಿ ಇಡಲಾಗಿತ್ತು.

ಧಾರವಾಡ(ಡಿ.26): ಸಂಚಾರಿ ಪೊಲಿಸರ ಸಮಯಪ್ರಜ್ಞೆಯಿಂದಾಗಿ ಬೆಂಕಿಬಿದ್ದ ವಾಹನದಿಂದ ಮಕ್ಕಳನ್ನು ಸರಕ್ಷಿತವಾಗಿ ರಕ್ಷಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಮಂಗಳವಾರ ಮುಂಜಾನೆ 12 ರ ಸುಮಾರಿಗೆ ನಗರದ ಎನ್.ಟಿ.ಎಫ್ ಮಾರ್ಗವಾಗಿ ಮೈಸೂರಿನತ್ತ ಹೊರಟಿದ್ದ ಚಿತ್ರದುರ್ಗದ ಜೆ.ಎಂ.ಜೆ ಟೂರ್ಸ ಆಂಡ್ ಟ್ರಾವೆಲ್ ನ ಕೆಎ-16. ಬಿ 4655 ಸಂಖ್ಯೆಯ ಖಾಸಗಿ ವಾಹನದ ಹಿಂದಿನ ಕ್ಯಾರಿಯರನಲ್ಲಿನ ಬೆಂಕಿ ಹೊತ್ತಿಕೊಂಡು ಸಣ್ಣಗೆ ಹೊಗೆ ಬರುತ್ತಿರುವುದನ್ನು ಗಮನಿಸಿದ ಪೊಲೀಸರು ವಾಹನವನ್ನು ತಡೆಗಟ್ಟಿ ಶಾಲಾ ಮಕ್ಕಳನ್ನು ಕೆಳಗಿಳಿಸಿ ವಾಹನದಲ್ಲಿನ ಬೆಂಕಿ ನಂದಿಸಿದ್ದಾರೆ.

ಮುದೋಳ ತಾಲೂಕಿನ ಲೋಕಾಪುರದ ಆದರ್ಶ ಆಂಗ್ಲ ಮಾಧ್ಯಮದ ಶಾಲಾ ಮಕ್ಕಳನ್ನು ಮೂರು ದಿನದ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದರಿಂದ ಊಟ ಉಪಹಾರ ತಯಾರಿಸಿಕೊಳ್ಳಲು ಎರಡು ಸಿಲಿಂಡರಗಳು ಸೇರಿದಂತೆ ಇತರೆ ಎಲ್ಲ ವಸ್ತುಗಳನ್ನು ಹಿಂದಿನ ಕ್ಯಾರಿಯರ್ ನಲ್ಲಿ ಇಡಲಾಗಿತ್ತು. ಸಿಲಿಂಡರ್ ಪಕ್ಕದಲ್ಲಿ ಹಾದಿದ್ದ ಇಂಡಿಕೇಟರ್ ಲೈಟಿನ ವೈರ್'ಗಳು ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿತ್ತು. ಇದರಿಂದ ಯಾವ ಕ್ಷಣದಲ್ಲಾದರೂ ಸಿಲಿಂಡರಗಳು ಸ್ಫೋಟಗೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು.

ಅದೃಷ್ಟವಶಾತ್ ಪೊಲೀಸರ ಸಮಯಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದೆ. ಬೆಂಕಿ ಕಾಣಿಸಿಕೊಂಡ ವಾಹನ ತಡೆದು ಪರಿಶೀಲನೆ ನಡೆಸಿದ ಪಿ.ಎಸ್.ಐ ಎನ್.ತಳವಾರ, ಮುಖ್ಯಪೇದೆ ಮಂಜುನಾಥ ಗದ್ದನಕೇರಿ, ಲಕ್ಷ್ಮಣ ಲಮಾಣಿ, ನಾಗರಾಜ ಪತ್ತೇಪೂರ ಅವರು ಬೆಂಕಿ ಕಾಣಿಸಿಕೊಂಡ ವಾಹನದಲ್ಲಿ ಮಕ್ಕಳ ಪ್ರವಾಸ ಮುಂದುವರೆಸುವುದು ಬೇಡ ಪ್ರವಾಸಕ್ಕೆ ಬೇರೆ ವಾಹನ ವ್ಯವಸ್ಥೆ ಮಾಡಿ ಎಂದು ಶಿಕ್ಷಕರಿಂದ ಮುಚ್ಚಳಿಕೆ ಬರೆಸಿಕೊಂಡು ನಂತರ ಪ್ರವಾಸ ಮುಂದುವರಿಸಿದರು.

(ಸಾಂದರ್ಭಿಕ ಚಿತ್ರ)