ಮಾಸ್ಕೋ[ಜು.15]: ಇತ್ತೀಚಿನ ದಿನಗಳಲ್ಲಿ ಯುವ ಜನಾಂಗಕ್ಕೆ ಅದೆಷ್ಟರ ಮಟ್ಟಿಗೆ ಸೆಲ್ಫೀ ಹುಚ್ಚು ಅಂದ್ರೆ, ಹೊಸದೇನಾದ್ರೂ ಕಂಡರೆ ಸಾಕು ಸೆಲ್ಫೀ ತೆಗೆದು ವಾಟ್ಸಪ್‌, ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂಗಳಲ್ಲಿ ಹರಿಬಿಡಲು ಮುಂದಾಗುತ್ತಾರೆ. ರಷ್ಯಾದಲ್ಲಿ ವಿದ್ಯುತ್‌ ಉತ್ಪಾದನಾ ಘಟಕವೊಂದರಿಂದ ಬಿಡುಗಡೆಯಾದ ಕಲ್ಮಶದಿಂದ ಉದ್ಭವಾದ ಕೆರೆಯ ಮುಂದೆಯೂ ಸಾವಿರಾರು ಮಂದಿ ಸೆಲ್ಫಿಗಾಗಿ ಮುಗಿ ಬಿದ್ದಿದ್ದಾರೆ.

ವಿದ್ಯುತ್‌ ಉತ್ಪಾದನೆ ಘಟಕದ ತ್ಯಾಜ್ಯದ ಸೇರ್ಪಡೆಯಿಂದ ಕೆರೆಯ ನೀರು ಅತ್ಯಾಕರ್ಷಕ ಆಕಾಶದ ತಿಳಿ ನೀಲಿ ಬಣ್ಣವನ್ನು ಹೋಲುತ್ತಿದೆ. ಆದರೆ, ನೀರು ಸಂಪೂರ್ಣ ವಿಷಕಾರಿಯಾಗಿದ್ದು, ಈ ನೀರಿಗೆ ಇಳಿಯದಂತೆ ಪರಿಸರವಾದಿಗಳು ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ, ಈ ಕೆರೆಯನ್ನು ‘ಸೈಬೀರಿಯಾದ ಮಾಲ್ಡೀವ್ಸ್’ ಎಂದು ಕರೆಯುತ್ತಿರುವ ಸಾರ್ವಜನಿಕರು ಮಾತ್ರ ಸೆಲ್ಫೀಗಾಗಿ ಮುಗಿ ಬೀಳುವ ಪ್ರವೃತ್ತಿಯಿಂದ ಮಾತ್ರ ಹಿಂದೆ ಸರಿದಿಲ್ಲ.

ಇಲ್ಲಿಗೆ ಭೇಟಿ ನೀಡುತ್ತಿರುವ ಸಾವಿರಾರು ಮಂದಿ ಕೆರೆಯ ಜೊತೆಗೆ ಸೆಲ್ಫೀ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುತ್ತಿದ್ದಾರೆ.