ಡೆಹ್ರಾಡೂನ್‌ [ಜು.13]: ಹೃಷಿಕೇಷದಲ್ಲಿ ಗಂಗಾನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ 90 ವರ್ಷದ ಹಳೆಯದಾದ ಪ್ರಸಿದ್ಧ ಲಕ್ಷ್ಮಣ ಸೇತುವೆಯನ್ನು ಬಂದ್‌ ಮಾಡಲು ನಿರ್ಧರಿಸಲಾಗಿದೆ. ಬ್ರಿಟಿಷ್‌ ಆಡಳಿತದಲ್ಲಿ ನಿರ್ಮಾಣವಾಗಿರುವ ಈ ಸೇತುವೆ ತನ್ನ ದೃಢತೆ ಕಳೆದುಕೊಂಡಿದೆ. 

ಇದನ್ನು ದುರಸ್ತಿ ಮಾಡಲೂ ಅಸಾಧ್ಯಎನ್ನುವ ಕಾರಣ ನೀಡಿ, ಇದರ ಮೇಲೆ ವಾಹನ ಸಂಚಾರ ನಿರ್ಬಂಧಕ್ಕೆ ಲೋಕೋಪಯೋಗಿ ಇಲಾಖೆಯ ತಜ್ಞರ ಸಮಿತಿ ವರದಿ ನೀಡಿತ್ತು. 

ಹೀಗಾಗಿ ಇನ್ನು ಮುಂದೆ ಇಲ್ಲಿ ಕೇವಲ ಪಾದಚಾರಿಗಳ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ. 1929 ರಲ್ಲಿ ನಿರ್ಮಾಣ ಮಾಡಲಾಗಿರುವ ಈ ಸೇತುವೆ ಮೇಲೆ ಇತ್ತೀಚಿನ ದಿನಗಳಲ್ಲಿ ವಾಹನ ಮತ್ತು ಪಾದಚಾರಿಗಳ ಸಂಚಾರ ಅಧಿಕಗೊಂಡಿದೆ. 

ಅಲ್ಲದೇ ಸಂಚಾರ ದಟ್ಟಣೆಯಿಂದ ಸೇತುವೆ ಒಂದು ಕಡೆ ವಾಲುತ್ತಿದೆ. ಹೃಷಿಕೇಶಕ್ಕೆ ಭೇಟಿ ನೀಡುವ ಪ್ರವಾಸಿಗರು ಮತ್ತು ಭಕ್ತರ ಗಮನ ಸೆಳೆಯುತ್ತಿತ್ತು.