ಹಾಸನ(ಅ.05): ಯುವಕರ ಗುಂಪೊಂದು 9 ವರ್ಷದ ಬಾಲಕನ ಮೇಲೆ ಅಮಾನವೀಯವಾಗಿ ದೌರ್ಜನ್ಯ ಎಸಗಿ, ಹಿಂಸೆ ನೀಡಿರುವ ಘಟನೆ ಹಾಸನದ ಅರಸೀಕೆರೆಯಲ್ಲಿ ನಡೆದಿದೆ.

ತೆಂಗಿನ ಮರವನ್ನ ಏರಿದ್ದ ಎನ್ನುವ ಕಾರಣಕ್ಕೆ ಜಾಲಿ ಮರದ ಮುಳ್ಳಿನ ಕೋಲಿನಿಂದ ಹೊಡೆದು, ಚುಚ್ಚಿ ಬಾಲಕನನ್ನು ವಿಕೃತವಾಗಿ ಥಳಿಸಿದ್ದಾರೆ. ಮುಬಾರಕ್, ಶರ್ಪು, ಅರ್ಪನ್, ಸದ್ದಾಂ ಸೇರಿದಂತೆ ಆರು ಮಂದಿಯ ಯುವಕರ ತಂಡ ಈ ದುಷ್ಕೃತ್ಯ ಎಸಗಿದೆ. ಬಾಲಕ ಪದೇ ಪದೇ ನನ್ನನ್ನ ಬಿಟ್ಟುಬಿಡಿ ಅಂತಾ ಅಂಗಲಾಚಿದರೂ, ಬಾಲಕನಿಗೆ ಮುಳ್ಳಿನಿಂದ ಚುಚ್ಚಿ ಚುಚ್ಚಿ ಅಟ್ಟಹಾಸ ಮೆರೆದಿದ್ದಾರೆ. ಅಲ್ಲದೇ ಇರುವೆ ಗೂಡಿದ್ದ ಕಲ್ಲಿನ ಮೇಲೆ ನಿಲ್ಲಿಸಿ, ಬಾಲಕ ನೋವಿನಿಂದ ಬಳಲುತ್ತಿದ್ದರೆ ಇವರೆಲ್ಲರೂ ಮಜಾ ತೆಗೆದುಕೊಳ್ಳುತ್ತಾ ನಕ್ಕಿದ್ದಾರೆ.

ಆ ಯುವಕರೇ ಮೊಬೈಲ್​'ನಲ್ಲಿ ಚಿತ್ರೀಕರಿಸಿದ ಮೇಲೆಯೂ ಬಾಲಕನಿಗೆ ಮನಬಂದಂತೆ ಥಳಿಸಿದ್ದಾರೆ. ಸದ್ಯ ಈ ಬಗ್ಗೆ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.