ಪ್ರಾಕೃತಿಕ ವಿಕೋಪಗಳು ಸ್ವಾಭಾವಿಕ, ಮನುಷ್ಯ ಅದನ್ನು ತಡೆಯಲು ಅದೆಷ್ಟೇ ಪ್ರಯತ್ನಿಸಿದರೂ ವ್ಯರ್ಥ. ವಾಸ್ತವವಾಗಿ ಮನುಷ್ಯನೇ ಇಂತಹ ದುರಂತಕ್ಕೆ ಕಾರಣಕರ್ತ. ಇಂತಹ ವಿಕೋಪಗಳಲ್ಲಿ ಬಿರುಗಾಳಿ ಕೂಡಾ ಒಂದು. ಇದರ ರಭಸಕ್ಕೆ ಎಲ್ಲವೂ ಧ್ವಂಸವಾಗುತ್ತದೆ, ನಾವೇನೇ ಕಸರತ್ತು ಮಾಡಿದರೂ ಇದರಿಂದ ಪಾರಾಗಲು ಸಾಧ್ಯವಿಲ್ಲ. ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ಸಿಸಿಟಿವಿ ದೃಶ್ಯವುಳ್ಳ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಬಿರುಗಾಳಿಯ ರಭಸಕ್ಕೆ ಮಾಲ್ ಒಂದು ಧ್ವಂಸವಾದ ದೃಶ್ಯಗಳು ಇದು ಒಳಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾಲ್ ಒಂದರಲ್ಲಿದ್ದ ಜನರು ಬಿರುಗಾಳಿಯಿಂದ ಪಾರಾಗಲು ಪ್ರಯತ್ನಿಸುವುದರೊಂದಿಗೆ ಮಾಲ್'ನ್ನು ಸುರಕ್ಷಿತವಾಗಿಡಲು ಹರಸಾಹಸಪಟ್ಟಿರುವುದು ಈ ವಿಡಿಯೋದಲ್ಲಿ ಕಂಡು ಬರುತ್ತದೆ. ಇದಕ್ಕಾಗಿ ಮೊದಲಿಗೆ ಮಾಲ್'ನ ಪ್ರವೇಶ ದ್ವಾರವನ್ನು ಭದ್ರವಾಗಿ ಮುಚ್ಚುತ್ತಾರೆ. ಆದರೆ ಬಿರುಗಾಳಿಯ ರಭಸವನ್ನು ತಡೆಯದಾದ ಬಾಗಿಲು ಪುಡಿಪುಡಿಯಾಗಿ ಬೀಳುತ್ತದೆ. ಇನ್ನು ಗಾಳಿಯ ರಭಸಕ್ಕೆ ಮಾಲ್ ಒಳಗಿನ ವಸ್ತುಗಳು ಸಂಪೂರ್ಣವಾಗಿ ಧ್ವಂಸಗೊಂಡಿರುವುದೂ ಿಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ತಂತ್ರಜ್ಞಾನ ಅದೆಷ್ಟೇ ಮುಂದುವರೆದರೂ ಪ್ರಕೃತಿಯ ಎದುರು ಮನುಷ್ಯ ತುಂಬಾ ಚಿಕ್ಕವನು. ಪ್ರಕೃತಿಯ ಕೋಪವನ್ನು ಎದುರಿಸಲು ಅಸಾಧ್ಯವೆಂದೇ ಹೇಳಬಹುದು

.