Asianet Suvarna News Asianet Suvarna News

ದೇಶದ ಖಾಸಗಿ ವಿವಿಗಳ ಪೈಕಿ ಕರ್ನಾಟಕದ ಮಣಿಪಾಲ ವಿವಿ ನಂ. 1

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಬಾಂಬೆ, ಐಐಟಿ ದೆಹಲಿ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್'ಸಿಗೆ), ಬೆಂಗಳೂರು ಜಾಗತಿಕ ಅಗ್ರ 200 ವಿವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ವಿದೇಶೀ ಶಿಕ್ಷಣ ಮತ್ತು ಅಧ್ಯಯನಕ್ಕೆ ಸಂಬಂಧಿಸಿದ ಬ್ರಿಟಿಷ್ ಕಂಪೆನಿ ಕ್ವಾಕರೇಲಿ ಸೈಮಂಡ್ಸ್ ವಿಶ್ವದ ಅಗ್ರ ವಿವಿಗಳ ಇತ್ತೀಚಿನ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ 3 ವಿವಿಗಳಿಗೆ ಸ್ಥಾನ ಲಭಿಸಿದೆ.

Top University List Has Been Published

ನವದೆಹಲಿ(ಜೂ.09): ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಬಾಂಬೆ, ಐಐಟಿ ದೆಹಲಿ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್'ಸಿಗೆ), ಬೆಂಗಳೂರು ಜಾಗತಿಕ ಅಗ್ರ 200 ವಿವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ವಿದೇಶೀ ಶಿಕ್ಷಣ ಮತ್ತು ಅಧ್ಯಯನಕ್ಕೆ ಸಂಬಂಧಿಸಿದ ಬ್ರಿಟಿಷ್ ಕಂಪೆನಿ ಕ್ವಾಕರೇಲಿ ಸೈಮಂಡ್ಸ್ ವಿಶ್ವದ ಅಗ್ರ ವಿವಿಗಳ ಇತ್ತೀಚಿನ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ 3 ವಿವಿಗಳಿಗೆ ಸ್ಥಾನ ಲಭಿಸಿದೆ.

ಕಳೆದ ವರ್ಷ 219ನೇ ರ್ಯಾಂಕ್'ನಲ್ಲಿದ್ದ ಐಐಟಿ ಬಾಂಬೆ ಈ ಬಾರಿ 179ನೇ ಸ್ಥಾನ ಪಡೆದಿದೆ. ಐಐಟಿ ದೆಹಲಿ 185 ರಿಂದ 172ನೇ ಸ್ಥಾನಕ್ಕೇರಿದೆ. ಆದರೆ ಐಐಎಸ್'ಸಿ 38 ರ್ಯಾಂಕ್ ಕುಸಿದಿದ್ದು, 190ನೇ ರ್ಯಾಂಕ್ ಪಡೆದಿದೆ. ಐಐಎಸ್'ಸಿಯನ್ನು ಮೊದಲ ಬಾರಿಗೆ ಐಐಟಿ ದೆಹಲಿ ಹಿಂದ್ದಿಕ್ಕಿದೆ.

ಖಾಸಗಿ ವಿವಿಗಳ ಪೈಕಿ ಮಣಿಪಾಲ ವಿವಿ ನಂ. 1

ಕ್ವಾಕರೇಲಿ ಸೈಮಂಡ್ಸ್ ವಿವಿ ಪ್ರಕಟಿಸಿರುವ ಭಾರತದ ಟಾಪ್ ವಿವಿಗಳ ಪಟ್ಟಿಯಲ್ಲಿ, ಖಾಸಗಿ ವಿಶ್ವವಿದ್ಯಾಲಯಗಳ ಪೈಕಿ ಕರ್ನಾಟಕದ ಮಣಿಪಾಲ ವಿವಿ ದೇಶಕ್ಕೇ ಮೊದಲ ರ್ಯಾಂಕ್ ಗಳಿಸಿದೆ. ಇನ್ನು ಒಟ್ಟಾರೆ ವಿವಿಗಳ ಪಟ್ಟಿಯಲ್ಲಿ ಮಣಿಪಾಲ ವಿವಿ 13ನೇ ಸ್ಥಾನದಲ್ಲಿ ಗುರುತಿಸಲ್ಪಟ್ಟಿದೆ.

Follow Us:
Download App:
  • android
  • ios