ನಾಳೆ ತಮಿಳುನಾಡು ಬಂದ್: ರಾಜ್ಯದಿಂದ ತಮಿಳುನಾಡಿಗೆ ಹೋಗುವ ಬಸ್ ಸೇವೆ ಸ್ಥಗಿತ

Tomorrow Tamilnadu Band
Highlights

ನಾಳೆ  ತಮಿಳುನಾಡು ಬಂದ್’ಗೆ  ಕರೆ ನೀಡಿರುವ ಹಿನ್ನೆಲೆಯಲ್ಲಿ  ಬಸ್’ಗಳ ಸೇವೆಯನ್ನು  ಸ್ಥಗಿತಗೊಳಿಸಲಾಗಿದೆ.  

ಬೆಂಗಳೂರು (ಏ. 04): ನಾಳೆ  ತಮಿಳುನಾಡು ಬಂದ್’ಗೆ  ಕರೆ ನೀಡಿರುವ ಹಿನ್ನೆಲೆಯಲ್ಲಿ  ಬಸ್’ಗಳ ಸೇವೆಯನ್ನು  ಸ್ಥಗಿತಗೊಳಿಸಲಾಗಿದೆ.  

ಕಾವೇರಿ ನೀರು ಹಂಚಿಕೆಯ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡು ನಾಳೆ ಬಂದ್’ಗೆ  ಕರೆ ನೀಡಿದೆ.  ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಿಂದ  ತಮಿಳುನಾಡಿಗೆ  ಹೋಗುವ 250 ಬಸ್ ಸೇವೆಯನ್ನು  ಕೆಎಸ್ ಆರ್ ಟಿಸಿ  ಸ್ಥಗಿತಗೊಳಿಸಿದೆ.  ರಾಜ್ಯದ ಬಸ್’ಗಳು ತಮಿಳುನಾಡಿಗೆ ಹೋದರೆ  ಅಹಿತಕರ ಘಟನೆ ಆಗುವ ಸಾಧ್ಯತೆ ಇರುವ  ಹಿನ್ನಲೆಯಲ್ಲಿ ಬಸ್ ಸೇವೆ ನಿಲ್ಲಿಸಲಾಗಿದೆ. ಬೆಳಗ್ಗೆಯಿಂದಲೇ ಬಸ್ ಸೇವೆ ಸ್ಥಗಿತವಾಗಿರುತ್ತದೆ.  ಸಂಜೆ ಪರಿಸ್ಥಿತಿ ನೋಡಿಕೊಂಡು ಬಸ್ ಓಡಿಸುವ ಚಿಂತನೆ ನಡೆಸಲಾಗಿದೆ. 

loader