ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ  ಹತ್ಯೆಗೆ ಸುಪಾರಿ ಕೊಟ್ಟ ರವಿ ಬೆಳಗೆರೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿಸಿಬಿ ಪೊಲೀಸರು ಕರೆ ತಂದಿದ್ದಾರೆ.  ರವಿ ಬೆಳೆಗೆರೆಗೆ  ರಾತ್ರಿ ವಾಸ್ತವ್ಯಕ್ಕೆ ಸಿಸಿಬಿಯಲ್ಲೇ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು (ಡಿ.08): ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟ ರವಿ ಬೆಳಗೆರೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿಸಿಬಿ ಪೊಲೀಸರು ಕರೆ ತಂದಿದ್ದಾರೆ. ರವಿ ಬೆಳೆಗೆರೆಗೆ ರಾತ್ರಿ ವಾಸ್ತವ್ಯಕ್ಕೆ ಸಿಸಿಬಿಯಲ್ಲೇ ವ್ಯವಸ್ಥೆ ಮಾಡಲಾಗಿದೆ.

ರವಿ ಬೆಳಗೆರೆ ಆರೋಗ್ಯ ಪರೀಕ್ಷೆಗೆ ಸಿಸಿಬಿ ವೈದ್ಯರನ್ನು ಕರೆತರುವ ಸಾಧ್ಯತೆಯಿದ್ದು ವೈದ್ಯಕೀಯ ಪರೀಕ್ಷೆಯ ನಂತರ ವಿಚಾರಣೆ ನಡೆಸಲಿದೆ. ಬೆಳೆಗೆರೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಪೊಲೀಸರು ಬೆಡ್ ವ್ಯವಸ್ಥೆಯನ್ನೂ ಮಾಡಿದ್ದಾರೆ.

ನಾಳೆ 2 ನೇ ಶನಿವಾರವಾದ್ದರಿಂದ ಕೋರ್ಟ್ ಕಲಾಪ ಇರುವುದಿಲ್ಲ. ನಾಳೆ ಬೆಳಗ್ಗೆ ನ್ಯಾಯಾಧೀಶರ ಮನೆಗೆ ಹಾಜರುಪಡಿಸುವ ಸಾಧ್ಯತೆಯಿದೆ.