Asianet Suvarna News Asianet Suvarna News

ನಾಳೆ ಆಕಾಶವಾಣಿಯಲ್ಲಿ SSLC ಪರೀಕ್ಷಾ ಸಿದ್ಧತೆ ಪ್ರಸಾರ

ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಮಧ್ಯಾಹ್ನ 2.35ರಿಂದ 3.05 ನಿಮಿಷದವರೆಗೆ ರಾಜ್ಯದ ಎಲ್ಲಾ 13 ಬಾನುಲಿ ಕೇಂದ್ರಗಳಲ್ಲಿ ಏಕ ಕಾಲದಲ್ಲಿ ಪ್ರಸಾರವಾಗಲಿದೆ. ಇದೇ ಕಾರ್ಯಕ್ರಮ ಎಫ್.ಎಂ. ರೈನ್ ಬೋ (101.3) ದಲ್ಲಿ ಸಂಜೆ 5.30ರಿಂದ 6 ಗಂಟೆಯವರೆಗೆ ಅರ್ಧ ಗಂಟೆ ಕಾಲ ಪ್ರಸಾರಗೊಳ್ಳಲಿದೆ.

Tomorrow Onwards SSLC Exam Preparation Guide Start FM

ಬೆಂಗಳೂರು(ಜ.15): ಮಾರ್ಚ್/ಏಪ್ರಿಲ್‌'ನಲ್ಲಿ ನಡೆಯಲಿರುವ ಎಸ್‌'ಎಸ್‌'ಎಲ್‌'ಸಿ ಪರೀಕ್ಷೆ ಸಿದ್ಧತೆ ಕುರಿತು ಆಕಾಶ ವಾಣಿಯು ಜ.16ರಿಂದ ಮಾ.20ರವರೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರಣಿ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿಗಳು ಪರೀಕ್ಷಾ ಸಿದ್ಧತೆ ಮತ್ತು ಮಾನಸಿಕವಾಗಿ ಪರೀಕ್ಷೆಗೆ ಹೇಗೆ ಸದೃಢರಾಗಬೇಕು ಎಂದು ತಜ್ಞರು, ವೈದ್ಯರು ಮತ್ತು ಅಧಿಕಾರಿಗಳಿಂದ ಮಾಹಿತಿ ನೀಡಲಿದೆ. ಪ್ರಮುಖವಾಗಿ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳ ಕುರಿತು ಮಾಹಿತಿ ನೀಡಲಿದೆ.

ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಮಧ್ಯಾಹ್ನ 2.35ರಿಂದ 3.05 ನಿಮಿಷದವರೆಗೆ ರಾಜ್ಯದ ಎಲ್ಲಾ 13 ಬಾನುಲಿ ಕೇಂದ್ರಗಳಲ್ಲಿ ಏಕ ಕಾಲದಲ್ಲಿ ಪ್ರಸಾರವಾಗಲಿದೆ. ಇದೇ ಕಾರ್ಯಕ್ರಮ ಎಫ್.ಎಂ. ರೈನ್ ಬೋ (101.3) ದಲ್ಲಿ ಸಂಜೆ 5.30ರಿಂದ 6 ಗಂಟೆಯವರೆಗೆ ಅರ್ಧ ಗಂಟೆ ಕಾಲ ಪ್ರಸಾರಗೊಳ್ಳಲಿದೆ.

ಸೋಮವಾರ ಗಣಿತ, ಮಂಗಳವಾರ ವಿಜ್ಞಾನ, ಬುಧವಾರ ಸಮಾಜ ವಿಜ್ಞಾನ, ಗುರುವಾರ ಇಂಗ್ಲಿಷ್ ಮತ್ತು ಶುಕ್ರವಾರ ಕೆಲವು ಪಾಠಗಳನ್ನು ಮಾತ್ರ ಪ್ರಸಾರ ಮಾಡಲಿದೆ.

Follow Us:
Download App:
  • android
  • ios