ಸರ್ಕಾರದ 60 ದಿನಗಳ ಮೀನುಗಾರಿಕೆ ನಿಷೇಧದ ಅವಧಿ ನಾಳೆ ಮಧ್ಯರಾತ್ರಿಗೆ ಮುಗಿಯಲಿದೆ. ಸರಕಾರದ ಆದೇಶದ ಪ್ರಕಾರ ಆಗಸ್ಟ್ ಒಂದರಿಂದ ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶ ಇರುವುದರಿಂದ ಕಡಲ ಮಕ್ಕಳು ಸಮುದ್ರಕ್ಕೆ ಇಳಿಯಲು ಸಜ್ಜಾಗಿದ್ದಾರೆ. ತಮ್ಮ ಬೋಟ್'ಗಳಿಗೆ ಪೂಜೆ ಪುನಸ್ಕಾರ ಪೂರೈಸಿ ಸಮುದ್ರಯಾನ ಅರಂಭಿಸಲು ತಯಾರಿ ನಡೆಸಿದ್ದಾರೆ.
ಕಾರವಾರ(ಜು.31): ಸರ್ಕಾರದ 60 ದಿನಗಳ ಮೀನುಗಾರಿಕೆ ನಿಷೇಧದ ಅವಧಿ ನಾಳೆ ಮಧ್ಯರಾತ್ರಿಗೆ ಮುಗಿಯಲಿದೆ. ಸರಕಾರದ ಆದೇಶದ ಪ್ರಕಾರ ಆಗಸ್ಟ್ ಒಂದರಿಂದ ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶ ಇರುವುದರಿಂದ ಕಡಲ ಮಕ್ಕಳು ಸಮುದ್ರಕ್ಕೆ ಇಳಿಯಲು ಸಜ್ಜಾಗಿದ್ದಾರೆ. ತಮ್ಮ ಬೋಟ್'ಗಳಿಗೆ ಪೂಜೆ ಪುನಸ್ಕಾರ ಪೂರೈಸಿ ಸಮುದ್ರಯಾನ ಅರಂಭಿಸಲು ತಯಾರಿ ನಡೆಸಿದ್ದಾರೆ.
ಮೀನು ಪ್ರಿಯರಿಗೆ ಇನ್ನೇನು ಸುಗ್ಗಿ ಕಾಲ. ಕಳೆದ 60 ದಿನಗಳಿಂದ ಸ್ಥಗಿತಗೊಂಡಿದ್ದ ಯಾಂತ್ರೀಕೃತ ಮೀನುಗಾರಿಕೆ ನಾಳೆಯಿಂದ ಆರಂಭವಾಗಲಿದೆ. ಹೀಗಾಗಿ ಕಾರವಾರದಲ್ಲಿ ಕಡಲ ಮಕ್ಕಳು ಮತ್ಸ್ಯ ಬೇಟೆಗೆ ಸಜ್ಜಾಗಿದ್ದಾರೆ. ತಮ್ಮ ಬೋಟ್ ಗಳಿಗೆ ಬಣ್ಣ ಹಚ್ಚಿ, ಪೂಜೆ ಸಲ್ಲಿಸಿದ್ದರು. ಮೂಲೆ ಸೇರಿದ್ದ ಬಲೆ ಮತ್ತಿತರ ಸಾಮಗ್ರಿಯನ್ನು ಹಡಗಿಗೆ ತುಂಬುವ ದೃಶ್ಯ ಸಾಮಾನ್ಯವಾಗಿ ಕಂಡು ಬಂತು.
ಮೀನುಗಾರಿಕೆ ನಿಷೇಧ ಪರಿಣಾಮ ಇಷ್ಟುದಿನ ಮಾರುಕಟ್ಟೆಯಲ್ಲಿ ಬೇಕಾದ ಮೀನುಗಳು ಸಿಗುತ್ತಿರಲಿಲ್ಲ. ಈಗ ಯಾಂತ್ರಿಕೃತ ಮೀನುಗಾರಿಕೆ ಆರಂಭವಾಗುತ್ತಿದ್ದು ಆಳ ಸಮುದ್ರದ ಮೀನುಗಾರಿಕೆ ನಡೆಸಬಹುದು. ವಿಧ ವಿಧದ ಮೀನುಗಳು ಬಲೆಗೆ ಬೀಳಲಿವೆ.
ಇನ್ನು ಯಾವಾಗಲೂ ಮೀನುಗಾರಿಕೆ ನಿಷೇಧದ ಅವಧಿ ಮುಗಿದ ಮರು ದಿನ ಯಾಂತ್ರಿಕೃತ ಮೀನುಗಾರಿಕೆ ಆರಂಭ ಆಗುತ್ತಿತ್ತು. ಆದರೆ ಈ ಬಾರಿ ಕಡಲ ಮಕ್ಕಳು ಆರಂಭದ ಮೊದಲ ದಿನವೇ ಕಡಲಿಗೆ ಇಳಿಯುತ್ತಿದ್ದಾರೆ. ಇನ್ನೂ ಮೀನುಗಾರಿಕೆಗೆ ಬ್ರೇಕ್ ಬಿದ್ದಿದ್ದರಿಂದ ಕೆಲಸವಿಲ್ಲದೇ. ಕೈಯ್ಯಲ್ಲಿ ಹಣವಿಲ್ಲದೇ ಪರದಾಡ್ತಿದ್ದ ಕಡಲ ಮಕ್ಕಳು ಇದೀಗ ಮೀನುಗಾರಿಕೆಗೆ ಚಾಲನೆ ಸಿಕ್ಕಿದ್ದ ಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ , ಮೀನುಗಾರರಿಗೆ ಸುಗ್ಗಿ ಕಾಲ ಬಂದೇ ಬಿಡ್ತು.. ನಾಳೆಯಿಂದ ಮತ್ಸ್ಯ ಬೇಟೆ ಚುರುಕುಗೊಳ್ಳಲಿದೆ.
