ಲೋಕಾಯುಕ್ತರ ಹತ್ಯೆಗೆ ಯತ್ನ ಖಂಡಿಸಿ ನಾಳೆ ವಕೀಲರ ಪ್ರತಿಭಟನೆ

Tomorrow Lawyers Protest against Lokayukta Stabbed
Highlights

ಲೋಕಾಯುಕ್ತ ವಿಶ್ವನಾಥ ಶೆಟ್ಟಿ ಚಾಕು ಇರಿದು ಹತ್ಯಗೆ ಯತ್ನಿಸಿದ ಘಟನೆಗೆ ರಾಜ್ಯ ಸರ್ಕಾರವೇ ಕಾರಣ.  ಕೊಲೆ ಸುಲಿಗೆ ನಡೆಯವುದಕ್ಕೆ ಇದು ಸ್ಪಷ್ಟ ನಿರ್ದರ್ಶನ. 

ಬೆಂಗಳೂರು (ಮಾ. 07): ಲೋಕಾಯುಕ್ತ ವಿಶ್ವನಾಥ ಶೆಟ್ಟಿ ಚಾಕು ಇರಿದು ಹತ್ಯಗೆ ಯತ್ನಿಸಿದ ಘಟನೆಗೆ ರಾಜ್ಯ ಸರ್ಕಾರವೇ ಕಾರಣ.  ಕೊಲೆ ಸುಲಿಗೆ ನಡೆಯವುದಕ್ಕೆ ಇದು ಸ್ಪಷ್ಟ ನಿರ್ದರ್ಶನ. 

ಲೋಕಾಯುಕ್ತ ಸಂಸ್ಥಗೆ ಯಾರು ಬರಬಾರದು ಎಂದು ಇಂತಹ ಘಟನೆ ನಡೆದಿದೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ  ಎ ಪಿ ರಂಗನಾಥ್ ಹೇಳಿದ್ದಾರೆ.  ಇಂತಹ ಅನೇಕ ನಿದರ್ಶನವಿದೆ.  ವಕೀಲರಗಳ ಮೇಲೂ ಹಲ್ಲೆಗಳಾಗಿವೆ.  ಸರ್ಕಾರಕ್ಕೆ ನೈತಿಕತೆ ಇದ್ರೆ ರಾಜಿನಾಮೆ ಕೊಡಲಿ.  ಲೋಕಾಯುಕ್ತರ ಮೇಲೆ ಹೀಗಾದ್ರೆ ಸಾಮಾನ್ಯರ ಗತಿ ಏನು?  ನಾವು ಇದನ್ನ ಖಂಡಿಸಿ ನಾಳೆ ಸಿಟಿ ಸಿವಿಲ್ ಕೋರ್ಟ್ ಮುಂದೆ ವಕೀಲರ ವತಿಯಿಂದ ಶಾಂತಿಯುತ ಪ್ರತಿಭಟನೆ ಮಾಡುತ್ತೇವೆ.  

ಒಂದು ವರ್ಷದ ಹಿಂದೆಯೇ ಸರ್ಕಾರಕ್ಕೆ ಗುಪ್ತಚರ ಇಲಾಖೆ ರಿರ್ಪೊರ್ಟ್ ಕೊಟ್ಟಿದೆ.  ಲೋಕಾಯುಕ್ತ ಕಛೇರಿಯಲ್ಲಿ ಭದ್ರತೆಯಿಲ್ಲ ಎಂದು ಸರ್ಕಾರಕ್ಕೆ ವರದಿ ಕೊಟ್ಟಿತ್ತು.  ಆದರೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ ಎಂದು ರಂಗನಾಥ್ ಹೇಳಿದ್ದಾರೆ. 

loader