ಟೊಮೆಟೋ ಮತ್ತಷ್ಟು ಹುಳಿಯಾಗುವ ದಿನಗಳು ಸಮೀಪಿಸುತ್ತಿದೆ. ಟೊಮೆಟೊ ಬೆಲೆ ಶತಕ ಸಮೀಪಿಸುತ್ತಿದೆ. ಈ ಮೂಲಕ ಗ್ರಾಹಕನ ಜೇಬಿಗೆ ಬಿಸಿ ಮುಟ್ಟಿಸುತ್ತಿದೆ.
ನವದೆಹಲಿ [ಜು.17]: ಮಳೆ ಕೊರತೆ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಟೊಮೆಟೋ ಬೆಲೆ ಗಗನ ಮುಖಿಯಾಗಿದ್ದು, ರಾಜಧಾನಿ ದೆಹಲಿಯಲ್ಲಿ ಶತಕದ ಸಮೀಪ ಸಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮಂಗಳವಾರ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೊಟೋ ಬೆಲೆ ಕೆಜಿಗೆ 60-80ರು.ವರೆಗೆ ತಲುಪಿದೆ.
ಪೂರೈಕೆಯಲ್ಲಿ ಕೊರತೆ ಮತ್ತು ಬೇಡಿಕೆ ಹೆಚ್ಚಳವಾಗಿದ್ದು ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟುಏರುವ ಭೀತಿ ಇದೆ.
