ನವದೆಹಲಿ[ಜು.17] : ‘ಜೀವಮಾನದಲ್ಲಿ ಎಂದಿಗೂ ಟೋಲ್‌ ರದ್ದಾಗುವುದಿಲ್ಲ. ಒಳ್ಳೇ ರಸ್ತೆ ಬೇಕು ಎಂಬುದಾದರೆ, ಸಾರ್ವಜನಿಕರು ಅದಕ್ಕಾಗಿ ಹಣ ನೀಡಲೇಬೇಕು’ ಹೀಗೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಕಡ್ಡಿ ಮುರಿದಂತೆ ಹೇಳಿದ್ದಾರೆ. 

ಲೋಕಸಭೆಯಲ್ಲಿ ಕೆಲ ಸಂಸದರು ದೇಶದ ವಿವಿಧ ಭಾಗಗಳಲ್ಲಿ ಹೆಚ್ಚು ಪ್ರಮಾಣದ ಟೋಲ್‌ ಸಂಗ್ರಹಿಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಗಡ್ಕರಿ, ಟೋಲ್‌ ಮೂಲಕ ಸಂಗ್ರಹಿಸಿದ ಹಣದಿಂದ ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆ ನಿರ್ಮಾಣಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.
 
ಟೋಲ್‌ ವ್ಯವಸ್ಥೆ ಎಂದಿಗೂ ರದ್ದಾಗಲ್ಲ. ಅಲ್ಲದೆ, ದೇಶಾದ್ಯಂತ ಕಳೆದ ಐದು ವರ್ಷಗಳಲ್ಲಿ 40 ಸಾವಿರ ಕಿ. ಮೀ ಉದ್ದದ ರಸ್ತೆ ನಿರ್ಮಿಸಲಾಗಿದೆ ಎಂದು ಹೇಳಿದರು.