ಚೆನ್ನೈ(ಸೆ.16): ಇಂದು ತಮಿಳುನಾಡು ಸಂಪೂರ್ಣ ಬಂದ್​ ಆಗಲಿದೆ. ಸಾರಿಗೆ ಸಂಚಾರ ಬಂದ್ ಆಗಲಿದೆ. ಹೋಟೆಲ್​, ವಸತಿಗೂ ತತ್ವಾರವಾಗಲಿದೆ. 

ಕರ್ನಾಟಕದಲ್ಲಿ ತಮಿಳುಗರ ಮೇಲೆ ಹಲ್ಲೆ ನಡೆಸಲಾಗಿದೆ ಅಂತ ಆರೋಪಿಸಿ ಬಂದ್‌ಗೆ ಕರೆ ನೀಡಿವೆ. ಈ ಬಂದ್​ಗೆ ರಾಜಕೀಯ ಪಕ್ಷಗಳಾದ ಡಿಎಂಕೆ, ವಿಜಯಕಾಂತ್ ನೇತೃತ್ವದ ಡಿಎಂಡಿಕೆ, ವಿಸಿಕೆ ಜೊತೆಗೆ ಕಾಂಗ್ರೆಸ್​ ಮತ್ತು ಬಿಜೆಪಿ ಬೆಂಬಲವೂ ಇದೆ. 

ಬಂದ್​ ಹಿನ್ನೆಲೆಯಲ್ಲಿ ತಮಿಳುನಾಡಿನ ಕಡೆ ಹೋಗೋ ಜನರು ಸ್ವಲ್ಪ ಎಚ್ಚರದಿಂದ ಇರಬೇಕು. ಕರ್ನಾಟಕ ನೋಂದಣಿ ಇರೋ ವಾಹನಗಳಲ್ಲಿ ತಮಿಳುನಾಡು ಕಡೆ ಹೋಗದೇ ಇರೋದು ಒಳ್ಳೇದು. ಇನ್ನು ವಿನಾಕಾರಣ ವದಂತಿಗಳಿಗೆ ಕಿವಿಗೊಡದೆ ಶಾಂತಿಯಿಂದ ಇರಬೇಕು. 

ಈ ಮಧ್ಯೆ ಬಂದ್ ವೇಳೆ ಕನ್ನಡಿಗರಿಗೆ ಸೂಕ್ತ ರಕ್ಷಣೆ ಕೊಡಬೇಕು ಅಂತ ಸಿಎಂ ಸಿದ್ದರಾಮಯ್ಯ ತಮಿಳುನಾಡು ಸಿಎಂ ಜಯಲಲಿತಾಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಇನ್ನೊಂದೆಡೆ ಗೃಹ ಸಚಿವ ಪರಮೇಶ್ವರ್​ ಮನ್ನೆಚ್ಚರಿಕೆ ವಹಿಸೋದಾಗಿ ಹೇಳಿದ್ದಾರೆ

ಜೊತೆಗೆ ಶನಿವಾರ ಮತ್ತು ಭಾನುವಾರವೂ ಕಾವೇರಿ ಸಂಬಂಧ ಪ್ರತಿಭಟನೆಗೆ ನರೆಯ ರಾಜ್ಯದ ವಿವಿಧ ಸಂಘಟನೆಗಳು ಮುಂದಾಗಿವೆ. ಹೀಗಾಗಿ, ಪ್ರಯಾಣಿಕರು ಮತ್ತು ಪ್ರವಾಸಿಗರು ಸ್ವಲ್ಪ ಎಚ್ಚರದಿಂದ ಇದ್ದರೆ ಒಳ್ಳೇದು..