Asianet Suvarna News Asianet Suvarna News

ಜನಸಾಮಾನ್ಯರ ಪರದಾಟಕ್ಕೆ ರಿಲೀಫ್!: ಇಂದಿನಿಂದ ಎಟಿಎಂಗಳಲ್ಲಿ 2 ಸಾವಿರ ಮುಖಬೆಲೆಯ ನೋಟ್

ಹಳೆಯ ಐನೂರು, ಸಾವಿರ ಮುಖ ಬೆಲೆ ನೋಟ್ ರದ್ದು ಪಡಿಸಿದ ಹಿನ್ನೆಲೆಯಲ್ಲಿ ಜನ ಬ್ಯಾಂಕ್​'ಗಳ ಮುಂದೆ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಹಣ ಪಡೀತಿದ್ದಾರೆ. ಆದರೂ ಕೆಲವೆಡೆ ಹಣವಿಲ್ಲ. ಎಟಿಎಂಗೆ ಹೊಸ ನೋಟು ಅಡ್ಜೆಸ್ಟ್ ಆಗುತ್ತಿಲ್ಲ  ಎನ್ನುವ ಸಮಸ್ಯೆಗಳು. ಇದೀಗ ಈ ಪರದಾಟಕ್ಕೆ ಅಲ್ಪ ಪ್ರಮಾಣದ ರಿಲೀಫ್ ಸಿಕ್ಕಿದೆ.  ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ 2ಸಾವಿರ ಮುಖಬೆಲೆಯ ಹೊಸ ನೋಟುಗಳು ಇಂದಿನಿಂದ ದೇಶದ ಕೆಲ ಎಟಿಎಂಗಳಲ್ಲಿ ದೊರೆಯಲಿವೆ. 2 ಸಾವಿರ ಮುಖಬೆಲೆಯ ನೋಟುಗಳನ್ನು ವಿತ್ ಡ್ರಾ ಮಾಡಲು ಹೊಸ ಮೈಕ್ರೋ ಕ್ಯಾಶ್ ಮೆಷಿನ್ ಗಳನ್ನು ಸ್ಥಾಪಿಸಲಾಗಿದ್ದು, ವಿಶೇಷ ತಂಡ ಕೂಡ ಕಾರ್ಯನಿರತವಾಗಿದೆ.

today onwards 2000 rupees currency will be available in ATM

ನವದೆಹಲಿ(ನ.15): 500, 1000 ರೂ ಮುಖಬೆಲೆಯ ನೋಟುಗಳು ಬಂದ್ ಆಗಿರುವುದರಿಂದ ಜನಸಾಮಾನ್ಯರು ಸಾಕಷ್ಟು ಪರದಾಡುವಂತಾಗಿತ್ತು. ಆದ್ರೆ ಇದೀಗ ಈ ಪರದಾಟಕ್ಕೆ ಸ್ವಲ್ಪ ರಿಲೀಫ್ ಸಿಗುವಂತಾಗಿದೆ. ಇಂದಿನಿಂದ ಎಟಿಎಂಗಳಲ್ಲಿ 2 ಸಾವಿರ ಮುಖಬೆಲೆಯ ಹೊಸ ನೋಟು ಸಿಗಲಿದೆ. ಸರ್ಕಾರಿ ಕಚೇರಿ ಆಸ್ಪತ್ರೆಯಲ್ಲಿ ಹಳೆ ನೋಟು ವಿನಿಮಯಕ್ಕೆ ಕಾಲಾವಧಿ ವಿಸ್ತರಣೆಯಾಗಿದೆ. ಈ ಕುರಿತಾದ ಒಂದು ವರದಿ.

ಹಳೆಯ ಐನೂರು, ಸಾವಿರ ಮುಖ ಬೆಲೆ ನೋಟ್ ರದ್ದು ಪಡಿಸಿದ ಹಿನ್ನೆಲೆಯಲ್ಲಿ ಜನ ಬ್ಯಾಂಕ್​'ಗಳ ಮುಂದೆ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಹಣ ಪಡೀತಿದ್ದಾರೆ. ಆದರೂ ಕೆಲವೆಡೆ ಹಣವಿಲ್ಲ. ಎಟಿಎಂಗೆ ಹೊಸ ನೋಟು ಅಡ್ಜೆಸ್ಟ್ ಆಗುತ್ತಿಲ್ಲ  ಎನ್ನುವ ಸಮಸ್ಯೆಗಳು. ಇದೀಗ ಈ ಪರದಾಟಕ್ಕೆ ಅಲ್ಪ ಪ್ರಮಾಣದ ರಿಲೀಫ್ ಸಿಕ್ಕಿದೆ.  ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ 2ಸಾವಿರ ಮುಖಬೆಲೆಯ ಹೊಸ ನೋಟುಗಳು ಇಂದಿನಿಂದ ದೇಶದ ಕೆಲ ಎಟಿಎಂಗಳಲ್ಲಿ ದೊರೆಯಲಿವೆ. 2 ಸಾವಿರ ಮುಖಬೆಲೆಯ ನೋಟುಗಳನ್ನು ವಿತ್ ಡ್ರಾ ಮಾಡಲು ಹೊಸ ಮೈಕ್ರೋ ಕ್ಯಾಶ್ ಮೆಷಿನ್ ಗಳನ್ನು ಸ್ಥಾಪಿಸಲಾಗಿದ್ದು, ವಿಶೇಷ ತಂಡ ಕೂಡ ಕಾರ್ಯನಿರತವಾಗಿದೆ.

ಡ್ರಾ, ವಿತ್ ಡ್ರಾದ ವಿನಿಮಯದ ಮಿತಿ ಏರಿಕೆ!

ಇನ್ನೂ ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಡ್ರಾ ಮತ್ತು ವಿತ್ ಡ್ರಾ ಹಣದ ಮಿತಿಯನ್ನ  ಕೇಂದ್ರ ಸರ್ಕಾರ ಹೆಚ್ಚಿಸಿದೆ. ಒಂದು ದಿನಕ್ಕೆ  ಈ ಹಿಂದೆ ಬ್ಯಾಂಕ್ ನಲ್ಲಿ 4000 ರೂಪಾಯಿ ವಿತ್ ಡ್ರಾ ಮಾಡಿಕೊಳ್ಳ ಬಹುದಿತ್ತು.. ಈ ಮಿತಿಯನ್ನು 4, 500ಕ್ಕೆ ಏರಿಸಲಾಗಿದ್ದು, ಎಟಿಎಂ ನಲ್ಲಿ 2000 ಮಿತಿಯನ್ನು 2500 ರೂಪಾಯಿಗೆ ಏರಿಸಲಾಗಿದೆ.

ಹಳೆ ನೋಟ್  ವಿನಿಮಯಕ್ಕೆ  10 ದಿನಗಳ ಅವಧಿ ವಿಸ್ತರಣೆ

ಇನ್ನೂ ಸರ್ಕಾರಿ ಕಚೇರಿ, ಸರ್ಕಾರಿ ಸಾರಿಗೆ ಸಂಸ್ಥೆ, ಪೆಟ್ರೋಲ್ ಬಂಕ್ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ, ಹಳೆಯ ನೋಟುಗಳ ಚಲಾವಣೆಗೆ ನವೆಂಬರ್ 14ರ ವರೆಗೆ ಅವಕಾಶ ನೀಡಲಾಗಿತ್ತು.. ಇದೀಗ ಕೇಂದ್ರ ಸರ್ಕಾರದ ಈ ಕಾಲಾವಧಿಯನ್ನು ನವೆಂಬರ್ 24ರವರೆಗೂ ವಿಸ್ತರಿಸಿದೆ. ಒಟ್ನಲ್ಲಿ  ಕ್ಯೂನಲ್ಲಿ ನಿಂತು ಹಣ ಪಡೆಯೋಕೆ ಪರದಾಡ್ತಿದ್ದ  ಜನಸಾಮಾನ್ಯರಿಗೆ ಸ್ವಲ್ಪ ಮಟ್ಟಿಗಾದ್ರು ರಿಲೀಫ್ ಸಿಕ್ಕಂತಾಗಿದೆ.

Latest Videos
Follow Us:
Download App:
  • android
  • ios