ಬೆಂಗಳೂರು(ಸೆ.09): ಇಂದು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ರೋಡಿಗಿಳಿಯಲ್ಲ. ಆಟೋ, ಟ್ಯಾಕ್ಸಿ ಸಂಚರಿಸಲ್ಲ, ನಮ್ಮ ಮೆಟ್ರೋ ಓಡಾಡಲ್ಲ, ಮಾಲ್, ಚಿತ್ರಮಂದಿರಗಳು ತೆಗೆಯಲ್ಲ. ಕಾರಣ ಕರ್ನಾಟಕ ಬಂದ್ . ಹೌದು ಕಾವೇರಿ ಕಿಚ್ಚಿಗೆ ಇವತ್ತು ಕರುನಾಡು ಸಂಪೂರ್ಣ ಸ್ತಬ್ದವಾಗಲಿದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಆದ ಅನ್ಯಾಯ ಖಂಡಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಸಂಪೂರ್ಣ ಯಶಸ್ವಿಯಾಗಲಿದೆ.
ತೀವ್ರಗೊಂಡ ಕಾವೇರಿ ಕಿಚ್ಚು: ಇಂದು ಕರ್ನಾಟಕ ಬಂದ್
ಹೌದು ರಾಜ್ಯದ ಜನರು ಇಂದು ಮತ್ತೊಂದು ಬಂದ್ ಎದುರಿಸಬೇಕಾಗಿದೆ. ಕಾವೇರಿ ಕಿಚ್ಚಿಗೆ ಇಂದು ಕರುನಾಡು ಸಂಪೂರ್ಣ ಸ್ತಬ್ಧವಾಗಲಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರೋದನ್ನು ವಿರೋಧಿಸಿ ಇಂದು ಕನ್ನಡಪರ ಸಂಘಟನೆಗಳ ಒಕ್ಕೂಟ ಕರ್ನಾಟಕ ಬಂದ್ ಗೆ ಕರೆ ನೀಡಿವೆ.
ಇಂದಿನ ಕರ್ನಾಟಕ ಬಂದ್ ಗೆ ಕಾವೇರಿ ಕೊಳ್ಳದ ಜಿಲ್ಲೆಗಳು ಸಂಪೂರ್ಣ ಸ್ತಬ್ದವಾಗಲಿವೆ. ಜನಜೀವನ ಅಸ್ತವ್ಯಸ್ತಗೊಳ್ಳುವುದು ಪಕ್ಕ ಆಗಿದೆ. ಈ ಬಂದ್'ಗೆ ಕೆಎಸ್ಆರ್‌ಟಿಸಿ, ಕನ್ನಡ ಚಿತ್ರೋದ್ಯಮ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಸುಮಾರು 1300ಕ್ಕೂ ಅಧಿಕ ಸಂಘಟನೆಗಳು ಬೆಂಬಲ ನೀಡಿವೆ.
ಏನಿರಲ್ಲ..
-ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ರೋಡಿಗಿಳಿಯಲ್ಲ
-ಆಟೋ, ಟ್ಯಾಕ್ಸಿ ಸಂಚರಿಸಲ್ಲ
-ನಮ್ಮ ಮೆಟ್ರೋ ಓಡಾಡಲ್ಲ
-ಮಾಲ್, ಚಿತ್ರಮಂದಿರಗಳು ಕ್ಲೋಸ್
-ಎಪಿಎಂಸಿ ಮಾರುಕಟ್ಟೆಗಳು ಬಂದ್
-ಶಾಲಾ ಕಾಲೇಜುಗಳಿಗೆ ರಜೆ
-ತಮಿಳು ಟಿವಿ ಚಾನೆಲ್ಗಳು ಬರಲ್ಲ
-ಪೆಟ್ರೋಲ್ ಬಂಕ್ ತೆರೆದಿರಲ್ಲ
-ಸರ್ಕಾರಿ ಕಚೇರಿಗಳು ಬಹುತೇಕ ಸ್ಥಗಿತ
-ಹೋಟೆಲ್, ರೆಸ್ಟೋರೆಂಟ್, ಬಾರ್ ಇರಲ್ಲ
-ಬ್ಯಾಂಕ್, ಪೋಸ್ಟ್ ಆಫೀಸ್ ಕೂಡಾ ಬಂದ್
ಇನ್ನು ಬಂದ್ ಇದ್ದರೂ ಕೆಲವೊಂದಿಷ್ಟು ತುರ್ತು ಸೇವೆಗಳು ಎಂದಿನಂತೆ ಇರಲಿವೆ.
ಏನಿರುತ್ತೆ?
-ರೈಲು ಸಂಚಾರ
-ಹಾಲು ಮಾರಾಟ,
-ಆಸ್ಪತ್ರೆ, ಆಂಬುಲೆನ್ಸ್
-ಎಟಿಎಂ ಸೌಲಭ್ಯ
-ಹಾಲು, ದಿನಪತ್ರಿಕೆಗಳು
ಸೇರಿದಂತೆ ಅಗತ್ಯ ತುರ್ತು ಸೇವೆಗಳು ಎಂದಿನಂತೆ ಇರಲಿವೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಬೆಂಗಳೂರಿನ ಔಷಧ ಅಂಗಡಿಗಳ ಸಂಘ ಬೆಂಬಲ ಕೊಟ್ಟಿದೆ. ಹೀಗಾಗಿ 3 ಸಾವಿರ ಮೆಡಿಕಲ್ ಷಾಪ್ಗಳು ಬೆಳಗ್ಗೆಯಿಂದ ಸಂಜೆ 6 ಗಂಟೆವರೆಗೆ ಸ್ಥಗಿತವಾಗಲಿವೆ. ಒಟ್ಟಿನಲ್ಲಿ ಕಾವೇರಿ ಕಿಚ್ಚಿಗೆ ಕರುನಾಡ ಸಂಪೂರ್ಣ ಸ್ತಬ್ದವಾಗಲಿದೆ.
