ಅವಧಿ ವಿಸ್ತರಣೆ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಳೆಯ ನೋಟು ಬಳಸಿ ಮೊಬೈಲ್‌ ರೀಚಾರ್ಜ್‌ ಸೇರಿದಂತೆ ಇನ್ನಾವುದೇ ಪಾವತಿ ಸಾಧ್ಯವಿರುವುದಿಲ್ಲ.

ನವದೆಹಲಿ (ಡಿ.15): ಹಳೆಯ ₹500 ನೋಟು ಬಳಸಿ ಬಿಲ್‌ ಪಾವತಿ ಅಥವಾ ಔಷಧ ಖರೀದಿಸಲು ಡಿಸೆಂಬರ್‌ 15ರ ಮಧ್ಯರಾತ್ರಿ ವರೆಗೂ ಮಾತ್ರ ಅವಕಾಶವಿದೆ.

ಅವಧಿ ವಿಸ್ತರಣೆ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಳೆಯ ನೋಟು ಬಳಸಿ ಮೊಬೈಲ್‌ ರೀಚಾರ್ಜ್‌ ಸೇರಿದಂತೆ ಇನ್ನಾವುದೇ ಪಾವತಿ ಸಾಧ್ಯವಿರುವುದಿಲ್ಲ.

ಆದರೆ ಬ್ಯಾಂಕ್‌ ಖಾತೆಗಳಿಗೆ ₹500 ಮುಖಬೆಲೆಯ ಹಳೆಯ ನೋಟುಗಳನ್ನು ಜಮೆ ಮಾಡಲು ಅಡ್ಡಿಯಿಲ್ಲ. 1000 ರೂ. ಮುಖಬೆಲೆ ನೋಟಿನ ಬಳಕೆ ನ. 24ರಂದು ಕೊನೆಯಾಗಿತ್ತು. ಆದರೆ 500, 1000 ರೂ. ಮುಖಬೆಲೆಯ ನೋಟುಗಳು ಡಿಸೆಂಬರ್​ 31ರವರೆಗೆ ಬ್ಯಾಂಕ್​ ಖಾತೆಗೆ ಜಮಾ ಮಾಡಬಹುದು.