Asianet Suvarna News Asianet Suvarna News

ಬರ ಪೀಡಿತ ಪ್ರದೇಶಗಳಲ್ಲಿ ಇಂದು ಮೋಡ ಬಿತ್ತನೆ: ಎಚ್.ಕೆ ಪಾಟೀಲ್'ರಿಂದ ಚಾಲನೆ

ಸತತವಾಗಿ 3 ವರ್ಷಗಳಿಂದ ರಾಜ್ಯ ಭೀಕರ ಬರಗಾಲ ಎದುರಿಸುತ್ತಿದ್ದು ಬರಪೀಡಿತ ಪ್ರದೇಶಗಳಲ್ಲಿ ಇಂದು ರಾಜ್ಯ ಸರ್ಕಾರ ಮೋಡಬಿತ್ತನೆ ಮಾಡಲಿದೆ. ಬೆಂಗಳೂರಿನ ಜಕ್ಕೂರು ವಿಮಾನ ನೆಲೆಯಿಂದ ವಿದ್ಯುಕ್ತವಾಗಿ  ಸಚಿವ ಸನ್ಮಾನ್ಯ ಶ್ರೀ ಎಚ್.ಕೆ. ಪಾಟೀಲ ಅವರು  ಮಧ್ಯಾಹ್ನ 2 ಗಂಟೆಗೆ ಉದ್ಘಾಟನೆ ಮಾಡಲಿದ್ದಾರೆ.  

Today Cloud sowing in karnataka

ಬೆಂಗಳೂರು(ಆ.21): ಸತತವಾಗಿ 3 ವರ್ಷಗಳಿಂದ ರಾಜ್ಯ ಭೀಕರ ಬರಗಾಲ ಎದುರಿಸುತ್ತಿದ್ದು ಬರಪೀಡಿತ ಪ್ರದೇಶಗಳಲ್ಲಿ ಇಂದು ರಾಜ್ಯ ಸರ್ಕಾರ ಮೋಡಬಿತ್ತನೆ ಮಾಡಲಿದೆ. ಬೆಂಗಳೂರಿನ ಜಕ್ಕೂರು ವಿಮಾನ ನೆಲೆಯಿಂದ ವಿದ್ಯುಕ್ತವಾಗಿ  ಸಚಿವ ಸನ್ಮಾನ್ಯ ಶ್ರೀ ಎಚ್.ಕೆ. ಪಾಟೀಲ ಅವರು  ಮಧ್ಯಾಹ್ನ 2 ಗಂಟೆಗೆ ಉದ್ಘಾಟನೆ ಮಾಡಲಿದ್ದಾರೆ.  

ಮೋಡಬಿತ್ತನೆಗಾಗಿ ಯಾದಗಿರಿ ಜಿಲ್ಲೆ ಸುರಪೂರ, ಗದಗ ಹಾಗೂ ಬೆಂಗಳೂರಿನಲ್ಲಿ 3-ರೆಡಾರ್ಗಳನ್ನು ಸ್ಥಾಪಿಸಲಾಗುತ್ತಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ ಮತ್ತು ಬೆಂಗಳೂರು ಎಚ್.ಎ.ಎಲ್ ವಿಮಾನ ನಿಲ್ದಾಣ ಬಳಸಿಕೊಂಡು 2-ವಿಶೇಷ ವಿಮಾನಗಳಿಂದ ಮೋಡ ಬಿತ್ತನೆ ಕಾರ್ಯಚರಣೆ ಕೈಗೊಳ್ಳಲಾಗುತ್ತದೆ.  

ಪ್ರಸ್ತುತ ಮೋಡ ಬಿತ್ತನೆ ಕಾರ್ಯಾಚರಣೆಯನ್ನು ಅನುಷ್ಟಾನಗೊಳಿಸಲು ರಾಜ್ಯ ಮಟ್ಟದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ವಿಷಯ ತಜ್ಞರು ಮತ್ತು ಪರಿಣಿತ ವಿಜ್ಞಾನಿಗಳನ್ನು ಒಳಗೊಂಡ ವಿವಿಧ ತಂಡಗಳಾಗಿ ರಚಿಸುವ ಮೂಲಕ ವೈಜ್ಞಾನಿಕವಾಗಿ ನಿರ್ವಹಿಸಲಾಗುತ್ತಿದೆ.

Follow Us:
Download App:
  • android
  • ios