ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಬನಶಂಕರಿ ದೇಗುಲದಲ್ಲಿ ಸಂಜೆ 5ರಿಂದ 9 ಗಂಟೆಯವರೆಗೆ ಭಕ್ತರಿಗೆ ದಶ೯ನ ಬಂದ್ ಮಾಡಲಾಗುವುದು. ಆದರೆ ಹೊರಗಿನಿಂದ ದಶ೯ನ ಪಡೆಯಲು ಅವಕಾಶವಿದೆ ಆದರೆ ಗಭ೯ಗುಡಿ ಪ್ರವೇಶವಿಲ್ಲ‌ ಎಂದು ಅರ್ಚಕರು ಮಾಹಿತಿ ನೀಡಿದ್ದಾರೆ.

ಬಾಗಲಕೋಟೆ(ಜ.31): ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ನಾಡಿನ ಶಕ್ತಿಪೀಠಗಳಲ್ಲೊಂದಾಗಿರುವ ಚಾಲುಕ್ಯರ ಬನಶಂಕರಿ ದೇಗುಲ ಬಾದಾಮಿಯ ಬನಶಂಕರಿ ದೇವಸ್ಥಾನ ದರ್ಶನ ಬಂದ್ ಮಾಡಿರುವುದಾಗಿ ದೇವಸ್ಥಾನದ ಪ್ರಧಾನ ಅರ್ಚಕರು ಸುವರ್ಣ ನ್ಯೂಸ್'ಗೆ ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಬನಶಂಕರಿ ದೇಗುಲದಲ್ಲಿ ಸಂಜೆ 5ರಿಂದ 9 ಗಂಟೆಯವರೆಗೆ ಭಕ್ತರಿಗೆ ದಶ೯ನ ಬಂದ್ ಮಾಡಲಾಗುವುದು. ಆದರೆ ಹೊರಗಿನಿಂದ ದಶ೯ನ ಪಡೆಯಲು ಅವಕಾಶವಿದೆ ಆದರೆ ಗಭ೯ಗುಡಿ ಪ್ರವೇಶವಿಲ್ಲ‌ ಎಂದು ಅರ್ಚಕರು ಮಾಹಿತಿ ನೀಡಿದ್ದಾರೆ.

ಬೆಳಿಗ್ಗೆಯಿಂದ ಸಂಜೆ 5 ಗಂಟೆಯವರೆಗೆ ಎಂದಿನಂತೆ ಭಕ್ತರಿಗೆ ಗಭ೯ಗುಡಿ ಪ್ರವೇಶಕ್ಕೆ ಅವಕಾಶವಿದೆ. ಆ ಬಳಿಕ ಚಂದ್ರಗ್ರಹಣದ ಬಳಿಕ ವಿಶೇಷ ಪೂಜೆ, ದಶ೯ನ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.