ನವದೆಹಲಿ (ಡಿ. 04): ಇಂಧನ ಮೇಲಿನ ಅವಲಂಬನೆ ಕಡಿತಕ್ಕಾಗಿ, ಹಳಿಗಳ ಪಕ್ಕ ಖಾಲಿ ಇರುವ 51 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಸೌರಶಕ್ತಿ ಪ್ಯಾನೆಲ್‌ಗಳನ್ನು ಅಳವಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.

ಈ ಮೂಲಕ ವಾರ್ಷಿಕ 30 ಗಿಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಗುರಿಯನ್ನು ಇಲಾಖೆ ಹಾಕಿಕೊಂಡಿದೆ. ಇದರಿಂದ ರೈಲ್ವೆಯ ಇಂಧನ ವೆಚ್ಚದಲ್ಲಿಯೂ ಉಳಿತಾಯವಾಗಲಿದೆ ಎನ್ನಲಾಗಿದೆ.

ಪ್ರಸ್ತುತ ರೈಲ್ವೆ ಪ್ರತೀ 100 ರು. ಆದಾಯ ಗಳಿಸುತ್ತಿದೆ ಎಂದಾದರೆ, ಇದಕ್ಕೆ ಪ್ರತಿಯಾಗಿ 111 ರು. ಖರ್ಚು ಮಾಡುತ್ತಿದೆ. ಸೌರ ವಿದ್ಯುತ್‌ ಉತ್ಪಾದನೆಯಿಂದ ವಾರ್ಷಿಕ ವಿದ್ಯುತ್‌ಗಾಗಿ ವ್ಯಯ ಮಾಡಲಾಗುವ 30 ಸಾವಿರ ಕೋಟಿ ರು. ಉಳಿಸಬಹುದು ಎನ್ನಲಾಗಿದೆ.