ತಮಿಳುನಾಡು ಮುಖ್ಯಮಂತ್ರಿ ಕೆ.ಪಳನೀಸ್ವಾಮಿ ಪ್ರಧಾನಿ ನರೇಂದ್ರ ಮೋದಿಯನ್ನು ಅವರ ನಿವಾಸದಲ್ಲಿಂದು ಭೇಟಿ ಮಾಡಿ ರಾಜ್ಯದ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು. ಎಐಎಡಿಎಂಕೆ ಸಂಸ್ಥಾಪಕ ಎಂಜಿಆರ್ ಹುಟ್ಟುಹಬ್ಬ ಮತ್ತು ಜಯಲಲಿತಾ ಭಾವಚಿತ್ರ ಅನಾವರಣಕ್ಕೆ ಪ್ರಧಾನಿಯನ್ನು ಆಹ್ವಾನಿಸಿದರು.
ನವದೆಹಲಿ (ಮೇ.24): ತಮಿಳುನಾಡು ಮುಖ್ಯಮಂತ್ರಿ ಕೆ.ಪಳನೀಸ್ವಾಮಿ ಪ್ರಧಾನಿ ನರೇಂದ್ರ ಮೋದಿಯನ್ನು ಅವರ ನಿವಾಸದಲ್ಲಿಂದು ಭೇಟಿ ಮಾಡಿ ರಾಜ್ಯದ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು. ಎಐಎಡಿಎಂಕೆ ಸಂಸ್ಥಾಪಕ ಎಂಜಿಆರ್ ಹುಟ್ಟುಹಬ್ಬ ಮತ್ತು ಜಯಲಲಿತಾ ಭಾವಚಿತ್ರ ಅನಾವರಣಕ್ಕೆ ಪ್ರಧಾನಿಯನ್ನು ಆಹ್ವಾನಿಸಿದರು.
ಜುಲೈ 17 ರಂದು ಎರಡೂ ಕಾರ್ಯಕ್ರಮಗಳು ಜರುಗಲಿವೆ. ಇದರಲ್ಲಿ ಭಾಗವಹಿಸಲು ಸಮಯಾವಕಾಶ ಮಾಡಿಕೊಳ್ಳಿ ಎಂದು ಕೋರಿ ಪಳನೀಸ್ವಾಮಿ ಮೋದಿಯವರಿಗೆ ಮುಂಚಿತವಾಗಿ ಪತ್ರ ಬರೆದಿದ್ದಾರೆ.
ರಾಷ್ಟ್ರಪತಿ ಚುನಾವಣೆ ಜುಲೈನಲ್ಲಿರುವ ಹಿನ್ನೆಲೆಯಲ್ಲಿ ಪಳನೀಸ್ವಾಮಿ ಮೋದಿಯವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ನಾವು ರಾಜಕೀಯದ ಬಗ್ಗೆ ಚರ್ಚೆ ನಡೆಸಲಿಲ್ಲ. ರಾಜ್ಯಕ್ಕೆ ಸಂಬಂಧಪಟ್ಟ ಸಾಕಷ್ಟು ವಿಚಾರಗಳ ಬಗ್ಗೆ ನಾವು ಮೆಮೊರೆಂಡಮ್ ಸಲ್ಲಿಸಿದ್ದೇನೆ ಎಂದು ಪಳನೀಸ್ವಾಮಿ ಹೇಳಿದ್ದಾರೆ.
