ಆದರೆ ಮುಖ್ಯಮಂತ್ರಿಯವರು ಮಾತನಾಡಿರುವುದು ಚಿಕಿತ್ಸೆಗೆ ಸ್ಪಂದಿಸಿ ಬೇಗನೆ ಚೇತರಿಸಿಕೊಳ್ಳುತ್ತಿರುದನ್ನು ಇದು ಸೂಚಿಸುತ್ತದೆ

ಚೆನ್ನೈ(ನ.25): ಹೌದು, ಆಸ್ಪತ್ರೆಗೆ ದಾಖಲಾದ 2 ತಿಂಗಳ ನಂತರ ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ ಸ್ವತಃ ಮಾತನಾಡಿದ್ದಾರೆ. ಮಾತನಾಡಿರುವ ಬಗ್ಗೆ ಖುದ್ದಾಗಿ ಅಪೊಲೊ ಆಸ್ಪತ್ರೆಯ ಅಧ್ಯಕ್ಷ ಡಾ.ಪ್ರತಾಪ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಜಯಲಲಿತಾ ಅವರು ಮಾತನಾಡಿದ್ದು ಗಂಟಲಿಗೆ ಹಾಕುವ ಕವಾಟ(ಟ್ರಾಕೋಸ್ಟಮಿ)ದ ಮೂಲಕ ಮಾತನಾಡಿದ್ದಾರೆ. ಕೆಲವೇ ಸೆಕೆಂಡುಗಳ ಕಾಲ ಅವರು ಮಾತನಾಡಿದ್ದು, ಈ ರೀತಿಯ ಚಿಕಿತ್ಸೆ ಪಡೆಯುತ್ತಿರುವ ಶೇ.90 ಮಂದಿ ಸಾಮಾನ್ಯವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ಆದರೆ ಮುಖ್ಯಮಂತ್ರಿಯವರು ಮಾತನಾಡಿರುವುದು ಚಿಕಿತ್ಸೆಗೆ ಸ್ಪಂದಿಸಿ ಬೇಗನೆ ಚೇತರಿಸಿಕೊಳ್ಳುತ್ತಿರುದನ್ನು ಇದು ಸೂಚಿಸುತ್ತದೆ ಎಂದು ಪ್ರತಾಪ್ ರೆಡ್ಡಿಯವರು ತಿಳಿಸಿದ್ದಾರೆ.

ಗಂಟಲಿಗೆ ಮಾತನಾಡುವ ಕವಾಟು ಅಳವಡಿಸಿವುದು ಕ್ಷಣಿಕ ಮಾತ್ರ. ಹೆಚ್ಚು ಗುಣಮುಖರಾದಂತೆ ಕೆಲವು ದಿನಗಳಲ್ಲಿ ಕವಾಟು ತೆಗೆದು ಸ್ವತಂತ್ರವಾಗಿ ಮಾತನಾಡುವ ಅವಕಾಶವನ್ನು ನೀಡಲಾಗುವುದು. ಶೀಘ್ರದಲ್ಲಿಯೇ ಸ್ವತಃ ಅವರೇ ಎದ್ದುನಿಂತು, ಓಡಾಡಲಿದ್ದಾರೆ. ಈ ಸಮಯ ಬಹುಬೇಗನೆ ಬರಲಿದೆ ಎಂದು ಹೇಳಿದ ರೆಡ್ಡಿಯವರು ಇನ್ನೊಂದು ಮುಖ್ಯ ಸಂಗತಿಯೇನಂದರೆ ಚಿಕಿತ್ಸೆಗೆ ಹೆಚ್ಚು ಸ್ಪಂದಿಸುತ್ತಿರುವ ಅವರು ನಿಜವಾಗಿಯೂ ಗಟ್ಟಿಗ ಮುಖ್ಯಮಂತ್ರಿ ಎಂದು ತಿಳಿಸಿದ್ದಾರೆ.