ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೈಯಲ್ಲಿ ಭರ್ಜರಿ ಹೊಡೆತ ತಿಂದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಂದು ಆಘಾತ ಎದುರಿಸಬೇಕಾಗಿ ಬಂದಿದೆ. 

ಪಕ್ಷದ ಇಬ್ಬರು ಶಾಸಕರಾದ ಶೀಲಭದ್ರ ದತ್ತಾ ಮತ್ತು ಸುನಿಲ್‌ ಸಿಂಗ್‌ ಸೋಮವಾರ ಸಂಜೆ ನವದೆಹಲಿಗೆ ಆಗಮಿಸಿದ್ದಾರೆ. ಅವರ ಜೊತೆಗೆ ಇತ್ತೀಚೆಗಷ್ಟೇ ಟಿಎಂಸಿಯಿಂದ ಅಮಾನತುಗೊಂಡ ಬಿಜೆಪಿ ನಾಯಕ ಮುಕುಲ್‌ ರಾಯ್‌ ಅವರ ಪುತ್ರ ಶಾಸಕ ಸುಭ್ರಾಂಶ್ಷು ರಾಯ್‌ ಕೂಡಾ ಇದ್ದಾರೆ. 

ಈ ಮೂವರೂ ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ಟಿಎಂಸಿಯ 140ಕ್ಕೂ ಹೆಚ್ಚು ಬಂಡಾಯ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಮುಕುಲ್‌ ರಾಯ್‌ ಹೇಳಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.