ತಿರುಪತಿ ಭಕ್ತರೇ ಇಲ್ಲೊಮ್ಮೆ ಗಮನಿಸಿ : 9 ದಿನ ದೇವಾಲಯ ಕ್ಲೋಸ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 14, Jul 2018, 2:03 PM IST
Tirupati Temple Shut Down 9 Days In August
Highlights

ಅಷ್ಟಬಂಧ ಬಾಲಾಲಯ ಮಹಾಸಂಪ್ರೋಕ್ಷಣಂ' ಆಚರಣೆ ಇರೋದ್ರಿಂದ 9 ದಿನಗಳವರೆಗೆ ಭಕ್ತಾಧಿಗಳಿಗೆ ಪ್ರವೇಶವನ್ನು ಟಿಟಿಡಿ ನಿರಾಕರಿಸಿದೆ. ಈ ಕುರಿತು ದೇವಾಲಯದ ಆಡಳಿತ ಮಂಡಳಿ ಶನಿವಾರ ಸಭೆ ನಡೆಸಿ ನಿರ್ಧಾರ ಕೈಗೊಂಡಿದೆ.  

ತಿರುಪತಿ :  ಆಗಸ್ಟ್‌ ತಿಂಗಳಿನಲ್ಲಿ ತಿರುಪತಿಗೆ ಹೋಗುವ ಪ್ಲಾನ್ ಇದ್ದರೆ  ಇಲ್ಲಿ ಗಮನಿಸಿ.  ಯಾಕೆಂದರೆ ತಿರುಪತಿ ದೇವಾಲಯದಲ್ಲಿ ಆಗಸ್ಟ್ ತಿಂಗಳಲ್ಲಿ 9 ದಿನಗಳ ಕಾಲ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.

ಆಗಸ್ಟ್ ತಿಂಗಳಿನಲ್ಲಿ ‘ಅಷ್ಟಬಂಧ ಬಾಲಾಲಯ ಮಹಾಸಂಪ್ರೋಕ್ಷಣಂ' ಆಚರಣೆ ಇರೋದ್ರಿಂದ 9 ದಿನಗಳವರೆಗೆ ಭಕ್ತಾಧಿಗಳಿಗೆ ಪ್ರವೇಶವನ್ನು ಟಿಟಿಡಿ ನಿರಾಕರಿಸಿದೆ. ಈ ಕುರಿತು ದೇವಾಲಯದ ಆಡಳಿತ ಮಂಡಳಿ ಶನಿವಾರ ಸಭೆ ನಡೆಸಿ ನಿರ್ಧಾರ ಕೈಗೊಂಡಿದೆ. ತಿರುಪತಿಯಲ್ಲಿ ಪ್ರತೀ 12 ವರ್ಷಕ್ಕೊಮ್ಮೆ ‘ಅಷ್ಟಬಂಧ ಬಾಲಾಲಯ ಮಹಾಸಂಪ್ರೋಕ್ಷಣಂ' ಪೂಜೆ ನಡೆಸಲಾಗುತ್ತದೆ. 

11ನೇ ತಾರೀಖಿನಂದು ಪೂಜೆಗೆ ಅಂಕುರಾರ್ಪಣೆ ನಡೆಯಲಿದ್ದು 16ನೇ ತಾರೀಖಿನವರೆಗೆ  ‘ಅಷ್ಟಬಂಧ ಬಾಲಾಲಯ ಮಹಾಸಂಪ್ರೋಕ್ಷಣಂ' ಆಚರಣೆ ನಡೆಯುತ್ತದೆ. 

ಈ ಸಮಯದಲ್ಲಿ ಆಯ್ದ 30 ಸಾವಿರ ಭಕ್ತರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಹೀಗಾಗಿ ಈ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರು ಈ ದಿನಗಳನ್ನು ಹೊರತು ಪಡಿಸಿ ಪ್ಲಾನ್‌ ಮಾಡಲು ದೇವಾಲಯದ ಆಡಳಿತ ಮಂಡಳಿ ವಿನಂತಿಸಿದೆ. 

loader