ತಿರುಪತಿ: ಜಗತ್ತಿನ ಶ್ರೀಮಂತ ದೇಗುಲವೆಂದೇ ಪರಿಗಣಿಸಲ್ಪಟ್ಟಿರುವ ತಿರುಪತಿ ವೆಂಕಟೇಶ್ವರ ದೇಗುಲದಲ್ಲಿ ಕಾಣಿಕೆ ಸಂಗ್ರಹ ಭಾನುವಾರ ದಾಖಲೆಯ ಕುಸಿತ ಕಂಡಿದೆ. 

ದೇಗುಲದ ಹುಂಡಿಯಲ್ಲಿ ಪ್ರತಿನಿತ್ಯ ಸುಮಾರು 3 ಕೋಟಿ ರು. ಕಾಣಿಕೆ ಸಂಗ್ರಹವಾಗುವಲ್ಲಿ, ಭಾನುವಾರ ಕೇವಲ 73 ಲಕ್ಷ ಮಾತ್ರ ಸಂಗ್ರಹವಾಗಿದೆ. ದೇಗುಲದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಆರು ದಿನಗಳ ವೈದಿಕ ಸಾಂಪ್ರದಾಯಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಭಕ್ತರ ಭೇಟಿಗೆ ಮಿತಿ ಹೇರಿರುವುದರಿಂದ, ಕಾಣಿಕೆ ಸಂಗ್ರಹ ಇಳಿಕೆಗೆ ಕಾರಣವಾಗಿದೆ. 

ಈ ಅವಧಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳ ಜೊತೆಗೆ, ಪ್ರಮುಖ ಅರ್ಚಕರು ಕೆಲವೊಂದು ಸಣ್ಣಪುಟ್ಟರಚನಾತ್ಮಕ ರಿಪೇರಿಗಳನ್ನು ಮಾಡುತ್ತಾರೆ.