ಈ ನೋಟುಗಳ ವಿನಿಮಯಕ್ಕೆ ನೀಡಲಾಗಿದ್ದ ಡಿ.30ರ ಗಡುವು ಮುಕ್ತಾಯಗೊಂಡಿದ್ದು, ಹಳೇ ನೋಟುಗಳ ಭವಿಷ್ಯವೇನು ಎಂಬುದನ್ನು ತಿಳಿಸುವಂತೆ ಕೋರಿ ಕೇಂದ್ರ ಮತ್ತು ಆರ್‌ಬಿಐಗೆ ತಿರುಮಲ ತಿರುಪತಿ ದೇವಸ್ಥಾನಂ ಪತ್ರ ಬರೆದಿದ್ದು, ಈ ಕುರಿತು ಅವುಗಳ ಪ್ರತ್ಯುತ್ತರದ ನಿರೀಕ್ಷೆಯಲ್ಲಿದೆ

ತಿರುಪತಿ(ಏ.7): ಅಪನಗದೀಕರಣಗೊಂಡ ನೋಟುಗಳ ವಿನಿಮಯಕ್ಕೆ ಕೊನೆಯ ದಿನಾಂಕ ಮುಕ್ತಾಯದ ಬಳಿಕವೂ ತಿರುಪತಿ ದೇವಸ್ಥಾನದ ಹುಂಡಿಗೆ ಭಕ್ತಾದಿಗಳು 15 ಕೋಟಿ ವೌಲ್ಯದ ಹಳೇ ನೋಟುಗಳನ್ನು ಹಾಕಿದ್ದಾರೆ. ಹಾಗಾಗಿ, ಈ ನೋಟುಗಳ ವಿನಿಮಯಕ್ಕೆ ನೀಡಲಾಗಿದ್ದ ಡಿ.30ರ ಗಡುವು ಮುಕ್ತಾಯಗೊಂಡಿದ್ದು, ಹಳೇ ನೋಟುಗಳ ಭವಿಷ್ಯವೇನು ಎಂಬುದನ್ನು ತಿಳಿಸುವಂತೆ ಕೋರಿ ಕೇಂದ್ರ ಮತ್ತು ಆರ್‌ಬಿಐಗೆ ತಿರುಮಲ ತಿರುಪತಿ ದೇವಸ್ಥಾನಂ ಪತ್ರ ಬರೆದಿದ್ದು, ಈ ಕುರಿತು ಅವುಗಳ ಪ್ರತ್ಯುತ್ತರದ ನಿರೀಕ್ಷೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಕಳೆದ 3 ತಿಂಗಳ ಅವಯಲ್ಲಿ ಹೊಸ ಮತ್ತು ಅಪನಗದೀಕರಣಗೊಂಡ ಹಳೇ ನೋಟುಗಳನ್ನು ಭಕ್ತಾದಿಗಳು ಹುಂಡಿಗೆ ಹಾಕಿದ್ದಾರೆ.