ಆಗಸ್ಟ್ ತಿಂಗಳಿನಲ್ಲಿ ತಿರುಪತಿಗೆ ಹೋಗುವವರಿದ್ದರೆ ಇಲ್ಲೊಮ್ಮೆ ಗಮನಿಸಿ. ಆಗಸ್ಟ್ ತಿಂಗಳ ಈ ದಿನಗಳಲ್ಲಿ ತಿರುಪತಿಯಲ್ಲಿ ದರ್ಶನ ಭಾಗ್ಯ ದೊರೆಯುವುದಿಲ್ಲ.
ತಿರುಪತಿ : ಆಗಸ್ಟ್ ತಿಂಗಳಿನಲ್ಲಿ ತಿರುಪತಿಗೆ ಹೋಗುವವರಿದ್ದರೆ ಇಲ್ಲೊಮ್ಮೆ ಗಮನಿಸಿ. ತಿರುಪತಿಯಲ್ಲಿ ಆಗಸ್ಟ್ ತಿಂಗಳಿನಲ್ಲಿ 'ಅಷ್ಟಬಂಧ ಬಾಲಾಲಯ ಮಹಾಸಂಪ್ರೋಕ್ಷಣಂ' ಆಚರಣೆ ಇರುವ ಕಾರಣ 5 ದಿನಗಳವರೆಗೆ ಭಕ್ತಾಧಿಗಳಿಗೆ ಪ್ರವೇಶವನ್ನು ಟಿಟಿಡಿ ನಿರ್ಬಂಧಿಸಿದೆ.
ಅಷ್ಟಬಂಧ ಬಾಲಾಲಯ ಮಹಾಸಂಪ್ರೋಕ್ಷಣಂ' ಪೂಜೆಯನ್ನು 12 ವರ್ಷಕ್ಕೊಮ್ಮೆ ಆಚರಿಸಲಾಗುವುದು. ಈ ಕುರಿತು ದೇವಾಲಯದ ಆಡಳಿತ ಮಂಡಳಿ ಇದೇ ತಿಂಗಳಿನಲ್ಲಿ ನಿರ್ಧಾರ ಕೈಗೊಳ್ಳಲಿದ್ದು, ಈಗಾಗಲೇ ಆಗಸ್ಟ್ 12ರಿಂದ 16ವರೆಗೆ ಅರ್ಚನೆ ಸೇವೆಯನ್ನು ಹಾಗೂ ಆಗಸ್ಟ್ 13-16ರವರೆಗೆ ಭಕ್ತಾಧಿಗಳಿಗೆ ದರ್ಶನವನ್ನು ರದ್ದುಗೊಳಿಸಲಾಗಿದೆ.
ಈ ದಿನಗಳಲ್ಲಿ ದರ್ಶನ ಅವಧಿ ಕಡಿತಗೊಳಿಸಲಾಗುತ್ತಿದೆ. ಆದ್ದರಿಂದ ಈ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರು ಈ ದಿನಗಳನ್ನು ಹೊರತು ಪಡಿಸಿ ಪ್ಲಾನ್ ಮಾಡಲು ದೇವಾಲಯದ ಆಡಳಿತ ಮಂಡಳಿ ವಿನಂತಿಸಿದೆ.
