ರಾಜ್ಯದಲ್ಲಿ ಮತ್ತೆ ಟಿಪ್ಪು ಜಯಂತಿ ಆಚರಣೆ ವಿಚಾರ ಮಾತನಾಡುತ್ತಿದೆ. ಈ  ಬಾರಿ ಸಿಎಂ ಕುಮಾರಸ್ವಾಮಿ ಅವರೆ ಟಿಪ್ಪು ಜಯಂತಿ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಅವರು ಎನು ಹೇಳಿದ್ದಾರೆ?

ಬೆಂಗಳೂರು[ನ.01] ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಅಂತ ಹಿರಿಯ ಕವಿಗಳು ಹೇಳಿದ್ದಾರೆ. ಆದರೆ ಅದರ ಅರ್ಥ ಬಿಜೆಪಿಗೆ ಗೊತ್ತಿಲ್ಲ. ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಕಾದು ನೋಡಿ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಮನಗರದ ಚಂದ್ರಶೇಖರ್ ವಿಚಾರ ಕುರಿತು ಸಿಎಂ ಮಾತನಾಡಿದರು. ನಾನು ಬಳ್ಳಾರಿಯಿಂದ ತಡವಾಗಿ ಬಂದೆ. ಇಂದು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದೆ. ಆಗ ಈ ವಿಚಾರವಾಗಿ ಚೀಟಿ‌ ಬಂತು. ಇದರ ಬಗ್ಗೆ‌ ವಿವರವಾದ‌ ಮಾಹಿತಿ ಈ ಸದ್ಯ ಇಲ್ಲ ನಾನು ಯಾರನ್ನೂ ಹಣ ಕೊಟ್ಟು ಖರೀದಿಸಿಲ್ಲ ಎಂದು ಸ್ಪಷ್ಟ ಪಡಿಸಿದರು. ಬಿಜೆಪಿಯವರು ಹಲವಾರು ಆಮಿಷಗಳನ್ನ ಒಡ್ಡಿ ಸೆಳಿತಾರೆ. ಇದು ಅವರ ನಡೆತೆಗೆ ಸಿಕ್ಕ ಉತ್ತರ‌. ರಾಮನಗರದಿಂದ ಬಿಜೆಪಿಯ ಅಭ್ಯರ್ಥಿ ಚುನಾವಣೆ ಕಣದಿಂದ ಹೊರ ಬಂದಿದ್ದಾರೆ. ಹಿಂದೆ ಎಸ್ಎಂ ಕೃಷ್ಣ ಅವರಿಗೂ ಇದೇ ಆಗಿತ್ತು ಎಂದರು.