ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರ ವಿರುದ್ಧ 2ನೇ ಹೆಂಡತಿ’ ಸ್ಪರ್ಧೆ!

Tipatur MLA 2nd wife contest her Husband
Highlights

ಇದು ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದ ಮಧುಕುಮಾರಿ, ನನಗೂ ಹಾಗೂ ನನ್ನ ಮಗನಿಗೆ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ತುಮಕೂರು: ಮೂರನೇ ಬಾರಿ ಶಾಸಕರಾಗಲು ಕಣಕ್ಕೆ ಧುಮುಕಿರುವ ತಿಪಟೂರು ಹಾಲಿ ಕಾಂಗ್ರೆಸ್ ಶಾಸಕ ಕೆ. ಷಡಕ್ಷರಿ ವಿರುದ್ಧ ಅವರ ಎರಡನೇ ಪತ್ನಿ ಎನ್ನಲಾದ ಮಧುಕುಮಾರಿ ಅವರೇ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಈ ಕುರಿತು ‘ಕನ್ನಡಪ್ರಭ’ದ

ಜತೆ ಮಾತನಾಡಿದ ಮಧುಕುಮಾರಿ, ಈ ಬಾರಿ ತಿಪಟೂರು ಕ್ಷೇತ್ರದಿಂದ ಕಣಕ್ಕೆ ಇಳಿಯುವುದು ಖಚಿತ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೋ ಅಥವಾ ಯಾವುದಾದರೂ ಪಕ್ಷದಿಂದ ಸ್ಪರ್ಧಿಸುತ್ತೇನೋ ಎಂಬುದನ್ನು ಸೋಮವಾರ ಖಚಿತ ಪಡಿಸುವುದಾಗಿ ಹೇಳಿದ್ದಾರೆ.

ಈಗಾಗಲೇ ಕೆಲ ಪಕ್ಷಗಳು ನನ್ನನ್ನು ಸಂಪರ್ಕಿಸಿರುವುದು ನಿಜ. ತಮ್ಮನ್ನು ಎರಡನೇ ವಿವಾಹವಾಗಿರುವ ತಿಪಟೂರು ಶಾಸಕ ಷಡಕ್ಷರಿ, ಈಗ ತಮಗೂ ಎರಡನೇ ವಿವಾಹಕ್ಕೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ಇದು ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದ ಮಧುಕುಮಾರಿ, ನನಗೂ ಹಾಗೂ ನನ್ನ ಮಗನಿಗೆ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಕಳೆದ 2 ತಿಂಗಳ ಹಿಂದೆಯೇ ಮಧುಕುಮಾರಿ ಚುನಾವಣಾ ಕಣಕ್ಕೆ ಧುಮುಕುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಅದು ನಿಜವಾಗುತ್ತಿದೆ. ಕೆಲ ತಿಂಗಳ ಹಿಂದೆ ಶಾಸಕ ಷಡಕ್ಷರಿ ತಮ್ಮನ್ನು ಮದುವೆಯಾಗಿದ್ದಾರೆ ಎಂದು ಮಧುಕುಮಾರಿ ಬಹಿರಂಗ ಹೇಳಿಕೆ ನೀಡಿದ್ದರು. ಇದನ್ನು ಷಡಕ್ಷರಿ ನಿರಾಕರಿಸಿದ್ದರು.

loader