ರಾಮ ಮಂದಿರ ನಿರ್ಮಾಣ ಭರವಸೆಯನ್ನು ಈಡೇರಿಸಿದ್ದರೆ ಜನರೇ ನಮ್ಮನ್ನು ಚಪ್ಪಲಿಯಿಂದ ಹೊಡೆಯುತ್ತಾರೆ ಎಂದು ಮಿತ್ರಪಕ್ಷ ಶಿವಸೇನೆ ಬಿಜೆಪಿಗೆ ಎಚ್ಚರಿಕೆ ನೀಡಿತ್ತು. ಇದಾದ ಮೇಲೆ ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡುವ ಮೂಲಕ ಸಂದೇಶ ರವಾನಿಸಿದ್ದಾರೆ.
ನವದೆಹಲಿ[ಜೂ. 06] ನರೇಂದ್ರ ಮೋದಿ ನೇತೃತ್ವದ ಸರಕಾರ ಮತ್ತೆ ಅಸ್ತಿತ್ವಕ್ಕೆ ಬಂದಿದೆ. ಈ ಬಾರಿಯಾದರೂ ರಾಮಂದಿರ ನಿರ್ಮಾಣ ಕೆಲಸ ಆರಂಭವಾಗಲಿದೆಯಾ? ಎಂದು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.
ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣದ ಘೋಷಣೆ ಮಾಡುವ ಸಮಯ ಬಂದಿದೆ. ಸಂಪೂರ್ಣ 67.703 ಹೆಕ್ಟೇರ್ ಜಾಗ ಕೇಂದ್ರ ಸರಕಾರಕ್ಕೆ ಸೇರಿದ್ದು , ಸುಪ್ರೀಂ ಕೋರ್ಟ್ ತೀರ್ಮಾನ ಹೊರಡಿಸಿದಾಗ ಪರಿಹಾರ ನೀಡಲು ಸಾಧ್ಯವಿದೆ.
ರಾಮ ಮಂದಿರ ಕಟ್ಟದಿದ್ರೆ ಜನ ಚಪ್ಪಲಿಯಿಂದ ಬಡಿತಾರೆ: ಶಿವಸೇನೆ!
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿಗೆ ಮೇ. 31ರಂದು ಪತ್ರ ಬರೆದಿದ್ದ ಸ್ವಾಮಿ , ಯಾರದ್ದೇ ಭೂಮಿಯನ್ನಾದರೂ ವಶಕ್ಕೆ ಪಡೆದುಕೊಳ್ಳುವ ಅಧಿಕಾರ ಕೇಂದ್ರ ಸರಕಾರಕ್ಕೆ ಇದೆ ಎಂದು ಹೇಳಿದ್ದರು.
