ಮುಂಬೈ[ಜೂ. 17] ಹಿರಿಯ ದಂಪತಿಗೆ ಆಭರಣ ಮತ್ತು ಮೊಬೈಲ್ ಸೇರಿ 4.75 ಲಕ್ಷ ರೂ. ದರೋಡೆ ಮಾಡಿದ ಆರೋಪದಡಿ ಕುರ್ಲಾ ನಿವಾಸಿಯಾದ ಅಭಿಮನ್ಯು ಗುಪ್ತಾ ಎಂಬಾತನನ್ನು ಬಂಧಿಸಲಾಗಿದೆ.

ಜುಹು ನಿವಾಸಿಗಳಾದ ಹಿರಿಯ ದಂಪತಿ ತಮಗೆ ವಂಚನೆಯಾಗಿದೆ ಎಂದು ಜನವರಿ 19 ರಂದೇ ದೂರು ದಾಖಲಿಸಿದ್ದರು. ಟಿಕ್ ಟಾಕ್ ನಲ್ಲಿ ವಿಡಿಯೋ ನೋಡಿದ ಅಧಿಕಾರಿಯೊಬ್ಬರು ಆರೋಪಿಯನ್ನು ತಕ್ಷಣ ಪತ್ತೆ ಮಾಡಿದ್ದಾರೆ.

ಅಭಿಮನ್ಯು ಮೇಲೆ ಕಳ್ಳತನದ ನಾಲ್ಕು ಪ್ರಕರಣಗಳಿವೆ. ಸಿಸಿಟಿವಿ ದೃಶ್ಯ ಇದ್ದರೂ ಸ್ಪಷ್ಟವಾಗಿರಲಿಲ್ಲ. ಆದರೆ ಸಿಸಿಟಿವಿಯಲ್ಲಿ ಇರುವ ವ್ಯಕ್ತಿಯನ್ನೇ ಹೋಲುವವನು ಟಿಕ್ ಟಾಕ್ ನಲ್ಲಿ ಸದಾ ಆ್ಯಕ್ಟೀವ್ ಆಗಿರುವುದು ಗೊತ್ತಾದ ನಂತರ ಶಂಕಿತನನ್ನು ವಶಕ್ಕೆ ಪಡೆದುಕೊಂಡೆವು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.