ತಮಿಳು ಭಾಷಿಕರು ಇರುವ ಪ್ರದೇಶಗಳಲ್ಲಿ ಬಿಗಿ ಭದ್ರತೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Aug 2018, 7:40 AM IST
Tight Security In Tamil People Areas
Highlights

ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ನಿಧನದ  ಹಿನ್ನೆಲೆಯಲ್ಲಿ ಬೆಂಗಳೂರಿನ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುವ ಪ್ರದೇಶಗಳಲ್ಲಿ  ಹೆಚ್ಚಿನ ಪ್ರಮಾಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 

ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ನಿಧನದ ಹಿನ್ನೆಲೆಯಲ್ಲಿ ತಮಿಳು ಭಾಷಿಗರ ಬಾಹುಳ್ಯ ಹೆಚ್ಚಿರುವ  ಪ್ರದೇಶದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಕರುಣಾನಿಧಿ ಅವರ ನಿಧನದ ವಾರ್ತೆ ಹೊರಬರುತ್ತಿದ್ದಂತೆ ತಮಿಳು ಭಾಷಿಕರ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಹೆಚ್ಚಿಸಲಾಗಿದೆ. 

ಕರ್ನಾಟಕ ಮತ್ತು ತಮಿಳುನಾಡಿನ ಗಡಿಪ್ರದೇಶ ವಾದ ಹೊಸೂರು ರಸ್ತೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳ ಲಾಗಿದೆ. ಶ್ರೀರಾಮಪುರ, ಹಲಸೂರು, ಇಂದಿರಾನಗರ, ವಿವೇಕನಗರ, ಚಂದಾಪುರ, ಭಾರತೀನಗರ, ಬೊ ಮ್ಮನಹಳ್ಳಿ, ಮಹಾಲಕ್ಷ್ಮೀಪುರ, ಮೈಸೂರು ರಸ್ತೆಯ ಆನಂದಪುರ, ಫ್ರೆಜರ್ ಟೌನ್ ಬಳಿಯ ಪೆರಿಯಾರ್ ನಗರ, ಟ್ಯಾನರಿ ರಸ್ತೆ, ಕೆ.ಆರ್ ಪುರ, ಗಾಂಧಿನಗರ ಸೇರಿದಂತೆ ತಮಿಳರು ನೆಲೆಸಿರುವ ನಗರದ ನಾನಾ ಭಾಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮುಂಜಾಗೃತ ಕ್ರಮವಾಗಿ ರಾಜ್ಯ ಮೀಸಲು ಪಡೆ, ನಗರ  ಸಶಸ್ತ್ರ ಮೀಸಲು ಪಡೆ ವಾಹನಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. 

ಆಯಾ ಠಾಣಾ ವ್ಯಾಪ್ತಿಗಳಲ್ಲಿನ ಇನ್ಸ್‌ಪೆಕ್ಟರ್ ಹಾಗೂ ಎಸಿಪಿಗಳು ನಿರಂತರವಾಗಿ ಗಸ್ತು ತಿರುಗುತ್ತಿದ್ದಾರೆ. ತಮಿಳುಭಾಷಿಕರ ಮುಖಂಡರ ಜತೆ ಕೂಡ ಮಾತನಾಡಲಾಗಿದೆ. ಮುಂಜಾಗೃತ ಕ್ರಮವಾಗಿ ರಾಜ್ಯದ ಬಸ್‌ಗಳನ್ನು ನಿಲ್ಲಿಸಲಾಗಿದೆ. ಅತ್ತಿಬೆಲೆಯಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

loader