Asianet Suvarna News Asianet Suvarna News

ಮಾಸ್ತಿಗುಡಿ ದುರಂತ ಹೇಗೆ ತಪ್ಪಿಸಬಹುದಿತ್ತು? ಥ್ರಿಲ್ಲರ್ ಮಂಜು ನೀಡಿದ ಸಲಹೆಗಳೇನು?

ತನಗೆ ಭಯವಾಗುತ್ತಿದೆ ಎಂದು ಒಬ್ಬ ಅರ್ಟಿಸ್ಟ್ ಹೇಳಿದಾಗ ನಾನಿದ್ದಿದ್ದರೆ ಆತನಿಂದ ಆ ಕೆಲಸ ಮಾಡಿಸುತ್ತಲೇ ಇರಲಿಲ್ಲ ಎಂದು ಮಂಜು ಹೇಳಿದ್ದಾರೆ.

thriller manju reaction on mastigudi accident

ಬೆಂಗಳೂರು(ನ. 08): ಮಾಸ್ತಿಗುಡಿ ಶೂಟಿಂಗ್ ವೇಳೆ ಇಬ್ಬರು ನಟರ ದುರಂತ ಸಾವಿಗೆ ಸಾಹಸ ನಿರ್ದೇಶಕ ರವಿ ವರ್ಮಾ ಅವರೇ ಸಂಪೂರ್ಣ ಹೊಣೆಗಾರರು ಎಂದು ಮತ್ತೊಬ್ಬ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅಭಿಪ್ರಾಯಪಟ್ಟಿದ್ಧಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಥ್ರಿಲ್ಲರ್ ಮಂಜು, ಸಾಹಸ ನಿರ್ದೇಶಕರು ಸರಿಯಾದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದಿದ್ದುದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ತನಗೆ ಭಯವಾಗುತ್ತಿದೆ ಎಂದು ಒಬ್ಬ ಅರ್ಟಿಸ್ಟ್ ಹೇಳಿದಾಗ ನಾನಿದ್ದಿದ್ದರೆ ಆತನಿಂದ ಆ ಕೆಲಸ ಮಾಡಿಸುತ್ತಲೇ ಇರಲಿಲ್ಲ ಎಂದು ಮಂಜು ಹೇಳಿದ್ದಾರೆ. ಆ ಘಟನೆಯಲ್ಲಿ ಏನೇನು ಪ್ರಿಕಾಶನ್ಸ್ ತೆಗೆದುಕೊಳ್ಳಬಹುದಿತ್ತೆಂದು ಥ್ರಿಲ್ಲರ್ ಮಂಜು ನೀಡಿರುವ ವಿವರ ಈ ಕೆಳಕಂಡಂತಿದೆ.

* ಆ ದೃಶ್ಯಗಳನ್ನು ಸಿಜಿ(Computer Generated Imagery) ಅಥವಾ ಗ್ರಾಫಿಕ್ಸ್ ಮಾಡಿಸಬಹುದಿತ್ತು

* ಹೆಲಿಕಾಪ್ಟರ್'ನಿಂದ ಬಿದ್ದ ತತ್'ಕ್ಷಣ ಟ್ಯೂಬ್'ಗಳನ್ನು ಅತ್ತ ಎಸೆಯಬಹುದಿತ್ತು. ಹಾಗೆ ಮಾಡಿದಿದ್ದರೆ ಆ ಹುಡುಗರು ಮೇಲೆ ಬಂದ ಬಳಿಕ ಟ್ಯೂಬ್'ಗಳನ್ನು ಹಿಡಿದುಕೊಂಡು ಬದುಕುತ್ತಿದ್ದ ಸಾಧ್ಯತೆ ಇತ್ತು.

* ತೆಪ್ಪಗಳಿಂದ ಉಪಯೋಗವಿಲ್ಲ... ಮೋಟಾರ್ ಬೋಟ್'ಗಳನ್ನು ಇಟ್ಟುಕೊಂಡಿರಬೇಕಿತ್ತು. ದಿನಕ್ಕೆ 10-15 ಸಾವಿರ ಬಾಡಿಗೆ ಹೋದರೆ ಹೋಗುತ್ತಿತ್ತು.

* ಹೆಲಿಕಾಪ್ಟರ್'ನಿಂದ ಜಂಪ್ ಮಾಡುವ ಸ್ಪಾಟ್'ನ ಆ ಕಡೆ ಮತ್ತು ಈ ಕಡೆ ರಕ್ಷಣಾ ಕಾರ್ಯಕ್ಕೆ ಜನರನ್ನು ಇರಿಸಬೇಕಿತ್ತು.

* ಕಾಪ್ಟರ್'ನಿಂದ ಬಿದ್ದ ಒಂದೆರಡು ನಿಮಿಷದಲ್ಲೇ ಆ ಸ್ಪಾಟ್'ಗೆ ಹೋಗಿ ರಕ್ಷಣೆ ಮಾಡಲು ಸಾಧ್ಯವಂತಿರಬೇಕು. ದೂರದಲ್ಲೆಲ್ಲೋ ಬೋಟ್'ಗಳನ್ನು ಇಟ್ಟುಕೊಂಡು ಕೂತಿದ್ದರೆ ಏನೂ ಪ್ರಯೋಜನವಿರುವುದಿಲ್ಲ.

* ಸೊಂಟಕ್ಕೆ ರೋಪ್ ಕಟ್ಟಿ ಜಂಪ್ ಮಾಡಿಸಬಹುದಿತ್ತು.

Follow Us:
Download App:
  • android
  • ios