Asianet Suvarna News Asianet Suvarna News

ಬೆಂಗಳೂರಿನ ಆವಲಹಳ್ಳಿಯಲ್ಲಿ ಮೂವರಿಗೆ ಚಾಕು ಇರಿದು ದರೋಡೆ

ರಸ್ತೆಯಲ್ಲಿ ನಡೆದು ಬರುತ್ತಿದ್ದ ಅವಲಹಳ್ಳಿ ನಿವಾಸಿ ನವೀನ್(23) ಹಾಗೂ ಆಂಧ್ರ ಮೂಲದ ಕೂಲಿ ಕಾರ್ಮಿಕರಾದ ಬಾಬು(26) ಹಾಗೂ ನರೇಂದ್ರ(24) ಎಂಬುವರಿಗೆ ಚಾಕುವಿನಿಂದ ಇರಿದು ಮೊಬೈಲ್, ಪರ್ಸ್ ದೋಚಿ ದ್ವಿಚಕ್ರ ವಾಹನದಲ್ಲಿ ಇಬ್ಬರು ದರೋಡೆಕೋರರು ಪರಾರಿಯಾಗಿದ್ದಾರೆ.

three persons assaulted and robbed at avalahalli bengaluru
  • Facebook
  • Twitter
  • Whatsapp

ಬೆಂಗಳೂರು: ಮೂವರಿಗೆ ಚಾಕು ಇರಿದು ದರೋಡೆ ಮಾಡಿರುವ ಘಟನೆ ನಗರದ ಹೊರವಲಯ ಅವಲಹಳ್ಳಿಯಲ್ಲಿ ನಡೆದಿದೆ. ಅವಲಹಳ್ಳಿ ಹಾಗೂ ಹಿರಂಡಹಳ್ಳಿ ರಸ್ತೆಯ ಗ್ಲಾಸ್ ಪ್ಯಾಕ್ಟರಿ ಬಳಿ ದರೋಡೆ ದುಷ್ಕೃತ್ಯ ಸಂಭವಿದೆ. ರಸ್ತೆಯಲ್ಲಿ ನಡೆದು ಬರುತ್ತಿದ್ದ ಅವಲಹಳ್ಳಿ ನಿವಾಸಿ ನವೀನ್(23) ಹಾಗೂ ಆಂಧ್ರ ಮೂಲದ ಕೂಲಿ ಕಾರ್ಮಿಕರಾದ ಬಾಬು(26) ಹಾಗೂ ನರೇಂದ್ರ(24) ಎಂಬುವರಿಗೆ ಚಾಕುವಿನಿಂದ ಇರಿದು ಮೊಬೈಲ್, ಪರ್ಸ್ ದೋಚಿ ದ್ವಿಚಕ್ರ ವಾಹನದಲ್ಲಿ ಇಬ್ಬರು ದರೋಡೆಕೋರರು ಪರಾರಿಯಾಗಿದ್ದಾರೆ. ಚಾಕು ಇರಿತಕ್ಕೆ ಒಳಗಾದ ಮೂವರನ್ನು ಮಣಿಪಾಲ್ ಮತ್ತು ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದರೋಡೆಕೋರರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Follow Us:
Download App:
  • android
  • ios