ಪಾಕಿಸ್ತಾನದಲ್ಲಿ ನಡೆಯಲಿರುವ ಏಷಿಯನ್ ಪಾರ್ಲಿಮೆಂಟರಿ ಅಸೆಂಬ್ಲಿಯಲ್ಲಿ ಭಾಗವಹಿಸಲು ಸಂಸದರಾದ ಶಶಿ ತರೂರು, ಮೀನಾಕ್ಷಿ ಲೇಖಿ ಮತ್ತು ಸ್ವಪಾನ್ ದಾಸ್ ಗುಪ್ತಾ ತೆರಳಿದ್ದಾರೆ.
ನವದೆಹಲಿ (ಮಾ.13): ಪಾಕಿಸ್ತಾನದಲ್ಲಿ ನಡೆಯಲಿರುವ ಏಷಿಯನ್ ಪಾರ್ಲಿಮೆಂಟರಿ ಅಸೆಂಬ್ಲಿಯಲ್ಲಿ ಭಾಗವಹಿಸಲು ಸಂಸದರಾದ ಶಶಿ ತರೂರು, ಮೀನಾಕ್ಷಿ ಲೇಖಿ ಮತ್ತು ಸ್ವಪಾನ್ ದಾಸ್ ಗುಪ್ತಾ ತೆರಳಿದ್ದಾರೆ.
ಏಷಿಯನ್ ಪಾರ್ಲಿಮೆಂಟರಿ ಅಸೆಂಬ್ಲಿ ನಾಳೆಯಿಂದ ಪ್ರಾರಂಭವಾಗಲಿದ್ದು ಮಾರ್ಚ್ 17 ರವರೆಗೆ ನಡೆಯಲಿದೆ. ಪಾಕ್ ಸೆನೆಟ್ ಅಧ್ಯಕ್ಷ ರಾಜಾ ರಬ್ಬಾನಿ, ಸಂಸತ್ ಸ್ಪೀಕರ್ ಸರ್ದಾರ್ ಆಯಜ್ ಸಾದಿಕ್ ರವರು ನಾಳೆ ಉದ್ಘಾಟನೆ ಮಾಡಲಿದ್ದಾರೆ.
ಸಂಸದರು ಮತ್ತು ಸ್ಪೀಕರ್ ಸೇರಿದಂತೆ 23 ದೇಶಗಳಿಂದ 70 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ.
