ಗೌರಿ ಲಂಕೇಶ್ ಆಪ್ತನಿಗೆ ಕೊಲೆ ಬೆದರಿಕೆ
ಬೆಂಗಳೂರು(ಸೆ.07): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ 48 ಗಂಟೆ ಕಳೆದಿದ್ದು, ಈಗ ಅವರ ಆಪ್ತರಾದ ವಿಚಾರವಾದಿ ಭಾಸ್ಕರ್ ಪ್ರಸಾದ್ಗೆ ಬೆದರಿಕೆ ಕರೆ ಬಂದಿದೆ.ಮಂಗಳೂರು ಮೂಲದ ಪುನೀತ್ ಎಂಬಾತನಿಂದ ಬೆದರಿಕೆ ಕರೆ ಬಂದಿದೆ. ಗೌರಿಯವರಿಗೆ ಆಪ್ತರಾಗಿದ್ದ ಇವರು ಉಡುಪಿ ಚಲೋ ನೇತೃತ್ವ ವಹಿಸಿದ್ದರು. ಈ ಸಂಬಂಧ ನನಗೆ ಜೀವ ಬೆದರಿಕೆ ಕರೆಯಿರುವುದಾಗಿ ಭಾಸ್ಕರ್ ಪ್ರಸಾದ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
