ದ್ವೀಪರಾಷ್ಟ್ರ ಜಪಾನ್‌ನಲ್ಲಿ ಹಗಿಬಿಸ್ ಚಂಡಮಾರುತದ ಆರ್ಭಟ| ಚಂಡಮಾರುತದ ಪರಿಣಾಮ ಜಪನ್‌ನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ|  42 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲು ಸಜ್ಜಾದ ಆಡಳಿತ| ಭಾರೀ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ| ಒಟ್ಟು 11 ಜನರನ್ನು ಆಪೋಷಣ ಪಡೆದ ಹೆಗ್‌ಬಿಸ್ ಚಂಡಮಾರುತ|

ಟೋಕಿಯೋ(ಅ.13): ದ್ವೀಪರಾಷ್ಟ್ರ ಜಪಾನ್‌ಗೆ ಪ್ರಬಲ ಹಗಿಬಿಸ್ ಚಂಡಮಾರುತ ಅಪ್ಪಳಿಸಿದ್ದು, ಜಪಾನ್‌ನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಪರಿಣಾಮ 11 ಜನರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ.

Scroll to load tweet…

ಜಪಾನ್ ರಾಜಧಾನಿ ಟೋಕಿಯೋ ಸೇರಿದಂತೆ ವಿವಿಧೆಡೆ ವಾಸವಿರುವ 42 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲು ಸ್ಥಳೀಯ ಆಡಳಿತ ಮುಂದಾಗಿದೆ.

Scroll to load tweet…

ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ, ಕೂಡಲೇ ನಗರವನ್ನು ತೊರೆಯುವಂತೆ ಜನರಿಗೆ ಸೂಚನೆ ನೀಡಲಾಗಿದೆ.

Scroll to load tweet…

ಚೀಬಾ ಪರ್ಫೆಕ್ಚರ್‌ನ ಇಚಿಹರಾ ಪ್ರದೇಶದಲ್ಲಿ ಬಿರುಗಾಳಿ ಬೀಸುತ್ತಿದ್ದು, ಸುಮಾರು 7 ಲಕ್ಷಕ್ಕೂ ಹೆಚ್ಚು ಜನರು ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದಾರೆ.

Scroll to load tweet…

ಹಗಿಬಿಸ್ ಚಂಡಮಾರುತದ ಪರಿಣಾಮವಾಗಿ ಇದುವರೆಗೂ 11 ಜನರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.