ಸಿವಿಲ್ ಡ್ರೆಸ್’ನಲ್ಲಿ ಗುಂಡು ಹಾರಿಸಿದವರು ಗುಪ್ತಚರರು..!

Thoothukudi Sterlite Protests: How Things Got This Far
Highlights

ವಾಹನವೊಂದರ ಮೇಲೆ ನಿಂತುಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ಮಾಡಿದ ನಾಗರಿಕರ ವೇಷದಲ್ಲಿದ್ದ ವ್ಯಕ್ತಿಗಳು ಗುಪ್ತಚರದ ಅಧಿಕಾರಿಗಳು ಎಂಬ ಮಾಹಿತಿಯನ್ನು ಮಹೇಂದ್ರ ಅವರು ಈ ಸಂದರ್ಭದಲ್ಲಿ ಹೊರಗೆಡವಿದ್ದಾರೆ.

ಚೆನ್ನೈ(ಮೇ.26]: ತೂತ್ತುಕುಡಿಯಲ್ಲಿನ ಸ್ಟರ್ಲೈಟ್ ಕಂಪನಿ ಮುಚ್ಚುವಂತೆ ಆಗ್ರಹಿಸಿ ಪ್ರತಿಭಟನೆ ವೇಳೆ ಪೊಲೀಸರ ಗೋಲಿಬಾರ್‌ನಲ್ಲಿ 13 ಮಂದಿ ಅಮಾಯಕರು ಸಾವನ್ನಪ್ಪಿದ್ದರು. ಪ್ರತಿಭಟನಾನಿರತರನ್ನು ಚದುರಿಸಲು ಲಾಠಿ ಪ್ರಹಾರ, ರಬ್ಬರ್ ಗುಂಡು ಅಥವಾ ಪ್ಲಾಸ್ಟಿಕ್ ಗುಂಡುಳಸಬಹುದಿತ್ತು. ಆದರೆ, ಪೊಲೀಸರು ಏಕಾಏಕಿ ಗೋಲಿಬಾರ್ ಮಾಡಿದರು ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ಈ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ದ ಸಹ ಸಂಸ್ಥೆ ‘ರಿಪಬ್ಲಿಕ್ ಟೀವಿ’ ವಾಹಿನಿ ರಹಸ್ಯ ಕಾರ್ಯಾಚರಣೆ ನಡೆಸಿದ್ದು, ಇದರಲ್ಲಿ ಪ್ರತಿಭಟನಾಕಾರರ ಮೇಲಿನ ಪೊಲೀಸ್ ಗೋಲಿಬಾರ್ ಅನ್ನು ತೂತ್ತುಕುಡಿಯಿಂದ ವರ್ಗಾವಣೆಯಾದ ಎಸ್‌ಪಿ ಪಿ.ಮಹೇಂದ್ರನ್ ಅವರು ಸಮರ್ಥಿಸಿಕೊಂಡಿದ್ದಾರೆ. ‘ಪ್ರತಿಭಟನಾಕಾರರನ್ನು ಚದುರಿಸಲು ಮೊದಲಿಗೆ ಅಶ್ರುವಾಯು ಬಳಸಿದೆವು. ಆದರೆ, ಪ್ರತಿಭಟನಾಕಾರರ ಗುಂಪು ಪ್ರವಾಹದಂತೆ ಪೊಲೀಸರ ವಿರುದ್ಧ ಬರುತ್ತಿತ್ತು. ಇಂಥ ಸಂದರ್ಭದಲ್ಲಿ ಜಲಫಿರಂಗಿ ಮತ್ತು ಅಶ್ರುವಾಯು ಬಳಸಲು ಸಾಧ್ಯವಿರಲಿಲ್ಲ. ಒಂದು ವೇಳೆ ನಾವು ಗೋಲಿಬಾರ್ ಮಾಡದಿದ್ದರೆ, ಏನಾಗುತ್ತಿತ್ತು ಎಂಬುದನ್ನು ನೀವು ಯೋಚಿಸಿದ್ದೀರಾ? ಪ್ರತಿಭಟನಾಕಾರರು ಹಿಂಸಾಚಾರದಲ್ಲಿ ತೊಡಗಲು ಬಿಟ್ಟು ಪೊಲೀಸರು ತಟಸ್ಥವಾಗಿ ಕುಳಿತಿದ್ದರೆ, ಏನೆಲ್ಲ ಅನಾಹುತಗಳಾಗುತ್ತಿತ್ತು ಎಂಬುದು ಗೊತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ಈ ಕಾರಣಕ್ಕಾಗಿಯೇ ಅನಿವಾರ್ಯವಾಗಿ ಗೋಲಿಬಾರ್ ಮಾಡಬೇಕಾಯಿತು ಎಂದು ಮಹೇಂದ್ರನ್ ಹೇಳಿದ್ದಾರೆ.

ವಾಹನವೊಂದರ ಮೇಲೆ ನಿಂತುಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ಮಾಡಿದ ನಾಗರಿಕರ ವೇಷದಲ್ಲಿದ್ದ ವ್ಯಕ್ತಿಗಳು ಗುಪ್ತಚರದ ಅಧಿಕಾರಿಗಳು ಎಂಬ ಮಾಹಿತಿಯನ್ನು ಮಹೇಂದ್ರ
ಅವರು ಈ ಸಂದರ್ಭದಲ್ಲಿ ಹೊರಗೆಡವಿದ್ದಾರೆ. ಅವರು ಗೋಲಿಬಾರ್ ಮಾಡಲು ಬಂದಿರಲಿಲ್ಲ. ಆದರೆ, ಪರಿಸ್ಥಿತಿಯ ಅವಲೋಕನಕ್ಕಾಗಿ ನೆರೆದಿದ್ದರು. ಆದರೆ, ಪರಿಸ್ಥಿತಿ ಕೈಮೀರುತ್ತಿದೆ ಎಂಬುದನ್ನು ಅರಿತು ಅವರೇ ಗೋಲಿಬಾರ್‌ಗೆ ಮುಂದಾದರು ಎಂದು ತೂತ್ತುಕುಡಿಯಿಂದ ವರ್ಗಾವಣೆಯಾದ ಎಸ್‌ಪಿ ಮಹೇಂದ್ರನ್ ಹೇಳಿದ್ದಾರೆ.

loader