ಲಕ್ನೋ(ಸೆ.15): ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಸಾರ್ವಜನಿಕ ಸಭೆ ಮುಕ್ತಾಯವಾದ ಕೂಡಲೇ ಅಲ್ಲಿನ ಸ್ಥಳೀಯರು ಮಂಚಕ್ಕಾಗಿ ಜಗಳ ಮಾಡಿಕೊಂಡ ಘಟನೆ ಮತ್ತೊಮ್ಮೆ ನಡೆದಿದೆ. ಅಷ್ಟೇ ಅಲ್ಲ, ಕೆಲವೇ ಹೊತ್ತಿನಲ್ಲಿ ಅಲ್ಲಿಂದ ಮಂಚಗಳು ಕಣ್ಮರೆಯಾಗಿದ್ದವು.

ಸಾರ್ವಜನಿಕ ಸಭೆ ಆಯೋಜಿಸಿದ್ದ ಸಂಘಟಕರು ಧ್ವನಿ ವರ್ಧಕದಲ್ಲಿ ಮಂಚಗಳನ್ನು ಅಲ್ಲೇ ಬಿಟ್ಟು ಹೋಗಿ ಎಂದು ಕೂಗಿ ಹೇಳುತ್ತಿದ್ದರೂ ಕೂಡ ಅದನ್ನು ಕೇಳಿಯೂ ಕೇಳಿಸದಂತೆ ಸ್ಥಳೀಯರು ಮಂಚವನ್ನು ಹೊತ್ತುಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಮಂಚ ಸಿಗದವರು ತಮಗೆ ಮನೆಗೆ ಕೊಂಡುಹೋಗಲು ಮಂಚ ಸಿಗಲಿಲ್ಲವಲ್ಲಾ ಎಂದು ಬೇಸರ ವ್ಯಕ್ತಪಡಿಸಿದರು. ತಮ್ಮ ಎರಡನೇ ಹಂತದ ಕಿಸಾನ್ ಯಾತ್ರೆಯನ್ನು ಇಂದು ಮಿಜೋರಂನಲ್ಲಿ ಆರಂಭಿಸಿದ ರಾಹುಲ್ ಗಾಂಧಿ ಮದಿಹಾನ್ ನಲ್ಲಿ ಕಾಟ್ ಸಭಾ ನಡೆಸಿದ್ದರು.

 ತಮ್ಮ ಎರಡನೇ ಹಂತದ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಮಿರ್ಜಾಪುರ, ಬದೋಹಿ ಮತ್ತು ಅಲಹಾಬಾದ್ ಜಿಲ್ಲೆಗಳಲ್ಲಿ ಖಾಟ್ ಸಭಾ ಮತ್ತು ಸಾರ್ವಜನಿಕ ಸಭೆಗಳನ್ನು ಆಯೋಜಿಸಲಿದ್ದು ಒಟ್ಟು 164 ಕಿಲೋ ಮೀಟರ್ ಸಂಚರಿಸಲಿದ್ದಾರೆ.

Scroll to load tweet…