‘ಮುಂದಿನ ನವರಾತ್ರಿ, ದಸರಾ ಉತ್ಸವವನ್ನು ನಾನು ನೋಡುತ್ತೇನೋ ಇಲ್ಲವೊ ಗೊತ್ತಿಲ್ಲ. ಬಹುಶಃ ಈ ಬಾರಿಯ ದಸರಾ ನನ್ನ ಕೊನೆಯ ಆಚರಣೆ ಆದರೂ ಅಚ್ಚರಿ ಇಲ್ಲ. ಇದು ನನ್ನ ಕೊನೇ ಸುದ್ದಿಗೋಷ್ಠಿ ಇದ್ದರೂ ಇರಬಹುದು’ – ಹೀಗೆ ವಿಷಾದಭರಿತ ಮಾತುಗಳನ್ನಾಡಿದವರು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ.

ಮಂಗಳೂರು: ‘ಮುಂದಿನ ನವರಾತ್ರಿ, ದಸರಾ ಉತ್ಸವವನ್ನು ನಾನು ನೋಡುತ್ತೇನೋ ಇಲ್ಲವೊ ಗೊತ್ತಿಲ್ಲ. ಬಹುಶಃ ಈ ಬಾರಿಯ ದಸರಾ ನನ್ನ ಕೊನೆಯ ಆಚರಣೆ ಆದರೂ ಅಚ್ಚರಿ ಇಲ್ಲ. ಇದು ನನ್ನ ಕೊನೇ ಸುದ್ದಿಗೋಷ್ಠಿ ಇದ್ದರೂ ಇರಬಹುದು’ – ಹೀಗೆ ವಿಷಾದಭರಿತ ಮಾತುಗಳನ್ನಾಡಿದವರು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಗಳೂರಿನ ಕುದ್ರೋಳಿ ಕ್ಷೇತ್ರದಲ್ಲಿ ದಸರಾ ಆಚರಣೆ ಕುರಿತು ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತುಂಬಾ ದಣಿದವರಂತೆ ಕಂಡುಬಂದರೂ ಎಂದಿನ ಲವಲವಿಕೆಯನ್ನು ತೋರ್ಪಡಿಸುತ್ತಾ ಮಾತನಾಡಿದ ಅವರು, ಕೊನೆಗೆ ಮೌನಕ್ಕೆ ಜಾರಿದರು.

ಸುದ್ದಿಗೋಷ್ಠಿಯಲ್ಲಿ ದಸರಾ ವಿಚಾರ ಬಿಟ್ಟು ರಾಜಕೀಯವನ್ನು ಪೂಜಾರಿ ಮಾತನಾಡಲಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ಜನಾರ್ದನ ಪೂಜಾರಿ ಅವರು ಬಂಟ್ವಾಳದ ನಿವಾಸದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ಆತ್ಮಚರಿತ್ರೆಯನ್ನೂ ಬರೆಯುತ್ತಿದ್ದಾರೆ.