ಸ್ವದೇಶಿ ನಿರ್ಮಿತ ಪ್ರಯಾಣಿಕ ವಿಮಾನ ದಲ್ಲಿ ಸಂಚರಿಸಬೇಕು ಎಂಬ ಭಾರತೀಯರ ದಶಕಗಳ ಕನಸು ಕೊನೆಗೂ ನನಸಾಗುತ್ತಿದೆ.

ನವದೆಹಲಿ (ಡಿ.27): ಸ್ವದೇಶಿ ನಿರ್ಮಿತ ಪ್ರಯಾಣಿಕ ವಿಮಾನ ದಲ್ಲಿ ಸಂಚರಿಸಬೇಕು ಎಂಬ ಭಾರತೀಯರ ದಶಕಗಳ ಕನಸು ಕೊನೆಗೂ ನನಸಾಗುತ್ತಿದೆ.

ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ತಯಾರಿಸಿರುವ ‘ಡಾರ್ನಿಯರ್ 228’ ವಿಮಾನವನ್ನು ಪ್ರಯಾಣಿಕ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲು ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅನುಮತಿ ನೀಡಿದೆ. ಡಾರ್ನಿಯರ್ ವಿಮಾನ 19 ಸೀಟು ಹೊಂದಿದ್ದು, ವಾಣಿಜ್ಯ ಉದ್ದೇಶಕ್ಕಾಗಿ ತಯಾರಾದ ಭಾರತದ ಮೊದಲ ವಿಮಾನವಾಗಿದೆ.

ಸದ್ಯ ಇದನ್ನು ರಕ್ಷಣಾ ಪಡೆಗಳು ಮಾತ್ರವೇ ಬಳಸುತ್ತಿವೆ. ಈಗ ಪ್ರಯಾಣಿಕ ಉದ್ದೇಶಕ್ಕೆ ಬಳಸಲು ಅನುಮತಿ ದೊರಕಿದೆ.