ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ಪುತ್ರ ಹಾಗೂ ಉ.ಪ್ರ. ಸಿಎಂ ಅಖಿಲೇಶ್ ಯಾದವ್ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಹೊರಹಾಕಿದಾಗ ಹೇಳಿದ ಮುಖ್ಯ ಅಂಶಗಳು:
- ಪಕ್ಷವನ್ನು ರಕ್ಷಿಸಲು ‘ಪ್ರೊಫೆಸರ್’ ರಾಮಗೋಪಾಲ್ ಹಾಗೂ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಪಕ್ಷದಿಂದ 6 ವರ್ಷಗಳ ಅವಧಿಗೆ ಉಚ್ಛಾಟಿಸಲಾಗುತ್ತಿದೆ.
- ರಾಮಗೋಪಾಲ್ ಅಖಿಲೇಶ್ ಅವರನ್ನು ದಾರಿ ತಪ್ಪಿಸುತ್ತಿದ್ದಾರೆ, ಆದರೆ ಅಖಿಲೇಶ್ ಅದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ.
- ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುವುದನ್ನು ನಾನು ನಿರ್ಧರಿಸುತ್ತೇನೆ.
- ಪಕ್ಷವನ್ನು ಕಟ್ಟಲು ನಾನು ಬಹಳಷ್ಟು ಶ್ರಮಪಟ್ಟಿದ್ದೇನೆ. ಅವರ ಪಾತ್ರವೇನಿದೆ? ನಾನು ಕಷ್ಟಪಡಬೇಕು, ಅವರು ಪ್ರಯೋಜನ ಪಡೆಯಬೇಕಾ?
- ನಮಗೆ ಪಕ್ಷವು ಅತೀ ಮುಖ್ಯ. ಪಕ್ಷವನ್ನು ಕಾಪಾಡುವುದು ನಮ್ಮ ಪ್ರಥಮ ಆದ್ಯತೆ
ಇದನ್ನೂ ಓದಿ:
