ಸುಷ್ಮಾ ಸ್ವರಾಜ್ ಕೇವಲ ಮುಸ್ಲಿಮರ ವೀಸಾ ಸಮಸ್ಯೆಗಳನ್ನು ಬಗೆಹರಿಸುತ್ತಾರೆ, ಆದರೆ ಹಿಂದೂಗಳು ವೀಸಾ ಪಡೆಯಲು ಬವಣೆಪಡುತ್ತಲೇ ಇದ್ದಾರೆ ಎಂದು ಹಿಂದೂ ಜಾಗರಣ ಸಂಘ ಎಂಬ ಖಾತೆದಾರರು ಪ್ರಧಾನಿ ಮೋದಿ ಹಾಗೂ ಸುಷ್ಮಾರವರ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು
ನವದೆಹಲಿ (ಜ.22): ಟ್ವಿಟರ್’ನಲ್ಲಿ ಯಾವಾಗಲೂ ಸಕ್ರಿಯರಾಗಿದ್ದು ಭಾರತೀಯರ ದೂರುದುಮ್ಮಾನಗಳಿಗೆ ತಕ್ಷಣ ಪ್ರತಿಕ್ರಿಯಿಸುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹಿಂದುತ್ವವಾದಿಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ಸುಷ್ಮಾ ನೀಡಿದ ಉತ್ತರ ಕೋಮು ದ್ವೇಷವನ್ನು ಹರಡಿಸುವವರಿಗೆ ಬಾಯಿಮುಚ್ಚಿಸುವಂತಿದೆ.
ಸುಷ್ಮಾ ಸ್ವರಾಜ್ ಕೇವಲ ಮುಸ್ಲಿಮರ ವೀಸಾ ಸಮಸ್ಯೆಗಳನ್ನು ಬಗೆಹರಿಸುತ್ತಾರೆ, ಆದರೆ ಹಿಂದೂಗಳು ವೀಸಾ ಪಡೆಯಲು ಬವಣೆಪಡುತ್ತಲೇ ಇದ್ದಾರೆ ಎಂದು ಹಿಂದೂ ಜಾಗರಣ ಸಂಘ ಎಂಬ ಖಾತೆದಾರರು ಪ್ರಧಾನಿ ಮೋದಿ ಹಾಗೂ ಸುಷ್ಮಾರವರ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ಆ ಟ್ವೀಟ್;ಗೆ ತಕ್ಷಣ ಪ್ರತಿಕ್ರಿಯಿಸಿದ ಸುಷ್ಮಾ, ಭಾರತವು ನನ್ನ ದೇಶ, ಭಾರತೀಯರೆಲ್ಲಾ ನನ್ನವರು. ಜಾತಿ, ಧರ್ಮ, ಭಾಷೆ, ಅಥವಾ ರಾಜ್ಯ ನನಗೆ ಅಪ್ರಸ್ತುತ, ಎಂದು ತಿರುಗೇಟು ನೀಡಿದ್ದಾರೆ.
