Asianet Suvarna News Asianet Suvarna News

ಸಮಸ್ಯೆ ಪರಿಹರಿಸಲು ಹೋಗಿ RBI ಮಾಡಿದ್ದು ಎಡವಟ್ಟು!: ಆರ್ಬಿಐ ಸೋತಿದ್ದು ಎಲ್ಲಿ?

ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿಯವರೇನೋ, ಕಪ್ಪುಹಣ, ಭಯೋತ್ಪಾದನೆ ಸೇರಿದಂತೆ ಹಲವು ಪಿಡುಗನ್ನು ತೊಲಗಿಸಲು ನೋಟ್ ಬ್ಯಾನ್ ಮಾಡಿದರು. ಆದರೆ, ನಂತರದ ದಿನಗಳಲ್ಲಿ ಜನರ ಸಮಸ್ಯೆಯನ್ನ ನಿಭಾಯಿಸಬೇಕಾಗಿದ್ದ ಭಾರತೀಯ ರಿಸರ್ವ್ ಬ್ಯಾಂಕ್, ಎಡವಟ್ಟು ಮಾಡುತ್ತಲೇ ಹೋಯಿತು. ಇದರ ಎಡವಟ್ಟಿನಿಂದ ಜನರು ಪಜೀತಿ ಪಡುವಂತಾಗಿದೆ.

This Is How RBI Failed

ನವದೆಹಲಿ(ಡಿ.22): ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿಯವರೇನೋ, ಕಪ್ಪುಹಣ, ಭಯೋತ್ಪಾದನೆ ಸೇರಿದಂತೆ ಹಲವು ಪಿಡುಗನ್ನು ತೊಲಗಿಸಲು ನೋಟ್ ಬ್ಯಾನ್ ಮಾಡಿದರು. ಆದರೆ, ನಂತರದ ದಿನಗಳಲ್ಲಿ ಜನರ ಸಮಸ್ಯೆಯನ್ನ ನಿಭಾಯಿಸಬೇಕಾಗಿದ್ದ ಭಾರತೀಯ ರಿಸರ್ವ್ ಬ್ಯಾಂಕ್, ಎಡವಟ್ಟು ಮಾಡುತ್ತಲೇ ಹೋಯಿತು. ಇದರ ಎಡವಟ್ಟಿನಿಂದ ಜನರು ಪಜೀತಿ ಪಡುವಂತಾಗಿದೆ.

ನೋಟ್ ಬ್ಯಾನ್ ನಂತರ ಹುಟ್ಟಿದ್ದು ಸಮಸ್ಯೆಗಳ ಸರಮಾಲೆ

ದೇಶದಲ್ಲಿ ಸಾವಿರ ಹಾಗೂ ಐನೂರರ ಮುಖಬೆಲೆಯ ಹಳೇ ನೋಟ್ ಗಳ ಅಮೌಲ್ಯೀಕರಣವ ಪ್ರಕ್ರಿಯೆಯನ್ನೇನೋ ಪ್ರಧಾನಿ ನರೇಂದ್ರ ಮೋದಿ, ಅದುಕೊಂಡತೆ ಮಾಡಿದ್ದರು. ಆದರೆ, ನವೆಂಬರ್ 8ರ ಘೋಷಣೆಯ ನಂತರ, ಒಂದೊಂದೇ ಸಮಸ್ಯೆ ಹುಟ್ಟುತ್ತಾ ಹೋಯ್ತು. ಜನರು ಕೂಡ, ನಿರ್ಧಾರವನ್ನ ಸ್ವಾಗತಿಸಿ, ಕೆಲ ದಿನಗಳ ಕಾಲ ಕಷ್ಟ ಅನುಭವಿಸಲು ಸಿದ್ಧವಾದ್ರು. ಆದ್ರೆ, ಜನರ ಸಮಸ್ಯೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾತ್ರ, ಸಮಸ್ಯೆ ಪರಿಹರಿಸಲು ಹೋಗಿ, ದಿನಕ್ಕೊಂದು ಪ್ರಾಬ್ಲಂ ಸೃಷ್ಟಿಸುತ್ತಾ ಹೋಯ್ತು.

ನೋಟ್ ಬ್ಯಾನ್ ನಂತರ ಜನರು ಎದುರಿಸುವ ಸಮಸ್ಯೆಗೆ ಸೂಕ್ತ ರೀತಿಯಲ್ಲಿ RBI ಸ್ಪಂದಿಸಲು ಶಕ್ತವಾಗಿದೆ ಎಂದು ಸರ್ಕಾರ ಅಂದುಕೊಂಡಿತ್ತು. ಆದ್ರೆ. ಸರ್ಕಾರದ ಲೆಕ್ಕಾಚಾರಗಳು ತಲೆಕೆಳಗಾಗಿದ್ದು, ನೋಟ್ ಬ್ಯಾನ್ ನಂತರ ಆರ್‍‍'ಬಿಐ ಹಲವೆಡೆ ಎಡವಿರುವುದು ಸ್ಪಷ್ಟವಾಗಿದೆ.

ಆರ್​​ಬಿಐ ಸೋತಿದ್ದು ಎಲ್ಲಿ?

ಆರ್ ಬಿಐ ಸೋತಿದ್ದು ಎಲ್ಲಿ ಅಂತ ನೋಡುವುದಾದರೆ ನೋಟ್ ಬ್ಯಾನ್ ನಂತರ ಸ್ಥಿತಿಯನ್ನು ನಿಭಾಯಿಸಲು ಯಾವೊಬ್ಬ ಹಿರಿಯ ಅಧಿಕಾರಿಗಳಿಗೂ ಅನಭವ ಇರಲಿಲ್ಲ. ಅಲ್ಲದೇ, ಸಂಸ್ಥೆಯ ಬಹುತೇಕ ಜನರಿಗೆ ನಗದು ಪೂರೈಕೆ ವ್ಯವಸ್ಥೆಯ ಕುರಿತಂತೆ ಅನುಭವ ಇರಲಿಲ್ಲ. ಇನ್ನು, ಜನಸಾಮಾನ್ಯರಿಗೆ ನೋಟುಗಳು ಶೀಘ್ರವಾಗಿ ತಲುಪುವಂತೆ ನೋಡಿಕೊಂಡಿಲ್ಲ. ನಂತರ ಸಮಸ್ಯೆ ಎದುರಾದಾಗ ಪರಿಹಾರ ಕಂಡುಕೊಳ್ಳುವ ಯತ್ನ ನಡೀತಾದ್ರೂ. ಅದು ಯಶಸ್ವಿಯಾಗಿಲ್ಲ. ಇನ್ನು, ಡಿಸೆಂಬರ್ 30ಕ್ಕೆ 8 ದಿನ ಬಾಕಿಯಿದ್ರೂ, ಎಟಿಂಎಂಗಳು ಸಂಪೂರ್ಣವಾಗಿ ಅಪ್ ಡೇಟ್ ಆಗಿಲ್ಲ, ಅಲ್ಲದೇ ಹಣ ಡ್ರಾ ಮಡಲು ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಇನ್ನು, ನಗದು ಜಮೆ ಹಾಗೂ ಡ್ರಾ ಕುರಿತಂತೆ  ದಿನಕ್ಕೊಂದು ನಿಯಮ ಹೇರಿದ ಆರ್‍‍‍ಬಿಐ ಸಮಸ್ಯೆಗಳ ಸರಮಾಲೆಯನ್ನೇ ಮಾಡುತ್ತಾ ಹೋಯಿತು.

ದೇಶದ ಜನರ ಹಿತದೃಷ್ಟಿಯಿಂದ ಮೋದಿ ಕೈಗೊಂಡ ನಿರ್ಧರವೇನೋ ಒಳ್ಳೆಯದೇ, ಆದರೆ, ಇದನ್ನ ಸರಿಯಾಗಿ ನಿರ್ವಹಿಸಬೇಕಾಗಿದ್ದ ಆರ್‍ ಬಿಐ ಮಾತ್ರ ಕೆಲ ಎಡವಟ್ಟುಗಳನ್ನ ಮಾಡಿ, ಜನರಿಗೆ ತೊಂದರೆಯನ್ನುಂಟುಮಾಡಿದೆ.

 

 

Follow Us:
Download App:
  • android
  • ios