ನಿನ್ನೆ ರಾತ್ರಿ ದುಷ್ಕರ್ಮಿಗಳ ಗುಂಡಿಗೆ ಬಳಿಯಾದ ಗೌರಿ ಲಂಕೇಶ್ ಸಾವಿಗೆ ಮಾಜಿ ಪತಿ ಚಿದಾನಂದ ರಾಜಘಟ್ಟ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಬೆಂಗಳೂರು (ಸೆ.06): ನಿನ್ನೆ ರಾತ್ರಿ ದುಷ್ಕರ್ಮಿಗಳ ಗುಂಡಿಗೆ ಬಳಿಯಾದ ಗೌರಿ ಲಂಕೇಶ್ ಸಾವಿಗೆ ಮಾಜಿ ಪತಿ ಚಿದಾನಂದ ರಾಜಘಟ್ಟ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಗೌರಿ ಲಂಕೇಶ್ ಹಾಗೂ ಪತ್ರಕರ್ತ ಚಿದಾನಂದ ರಾಜಘಟ್ಟ ಮದುವೆಗೂ ಮುನ್ನವೇ ಪರಿಚಿತರು. ಇಬ್ಬರೂ ಜತೆಯಲ್ಲೇ ಓದಿದವರು, ಜತೆಯಲ್ಲೇ ಕೆಲಸ ಮಾಡಿದವರು. ಕೊನೆಗೆ 1980 ರಲ್ಲಿ ವಿವಾಹವಾಗುತ್ತಾರೆ. ಒಂದಿಷ್ಟು ಕಾಲ ಒಟ್ಟಿಗೆ ಸಂಸಾರ ನಡೆಸುತ್ತಾರೆ. ಕಾಲಾನಂತರ ವಿಚ್ಚೇದನ ತೆಗೆದುಕೊಳ್ಳುತ್ತಾರೆ. ವಿಚ್ಛೇದನದ ಬಳಿಕವೂ ಚಿದಾನಂದ ರಾಜಘಟ್ಟ ಒಳ್ಳೆಯ ಸ್ನೇಹಿತನಾಗಿರುತ್ತಾರೆ.
ಚಿದಾನಂದ ರಾಜಘಟ್ಟ ಅಮೇರಿಕಾದಲ್ಲಿ ನೆಲೆಸಿದ್ದು ಟೈಮ್ಸ್ ಆಫ್ ಇಂಡಿಯಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
