ಮೋದಿ ಏನೇ ಹೇಳಿದರೂ ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲೋದು ಗ್ಯಾರಂಟಿ: ಸಿಎಂ

This is how CM Siddaramaiah reacts of Modi speech
Highlights

'ಮೋದಿ, ಶಾ ಏನೇ ಹೇಳಿದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲೋದು ಗ್ಯಾರಂಟಿ,' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹೊಸಕೋಟೆ: 'ಮೋದಿ, ಶಾ ಏನೇ ಹೇಳಿದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲೋದು ಗ್ಯಾರಂಟಿ,' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಭಾಷಣ ಮಾಡಿದ ಮೋದಿಗೆ ಪ್ರತಿಕ್ರಿಯೆ ನೀಡಿರುವ, ಮುಖ್ಯಮಂತ್ರಿ ಮುಂದಿನ ಸರಕಾರವೂ ಕಾಂಗ್ರೆಸ್ಸಿನದ್ದೇ ಎಂದು ಹೇಳಿದ್ದು, ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಮಹದಾಯಿ ವಿಷಯವನ್ನೇ ಪ್ರಸ್ತಾಪಿಸದ ಮೋದಿ, ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ನೇತೃತ್ವದ ಸರಕಾರದ ವಿರುದ್ಧ ಕಠಿಣವಾದ ಮಾತುಗಳಿಂದ ಹರಿಹಾಯ್ದರು.

'ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡಬೇಕಾದರೆ ಕಾಂಗ್ರೆಸ್ ಅನ್ನು ಕಿತ್ತೊಗೆಯಿರಿ. ವಂಶ ರಾಜಕಾರಣದಿಂದ ಕರ್ನಾಟಕವನ್ನು ಮುಕ್ತಗೊಳಿಸಬೇಕಾಗಿದೆ. ಸರ್ಕಾರದ ಪ್ರತಿ ಯೋಜನೆಗಳಲ್ಲಿ ಸರಕಾರ ಕಮಿಷನ್ ಪಡೆಯುತ್ತಿದೆ,' ಎಂದರು.

loader